ದಾವಣಗೆರೆ, ಜೂ. 10- ಜಿಲ್ಲೆಯಲ್ಲಿ ಬುಧವಾರ 3 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 8 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರೋಗಿ ಸಂಖ್ಯೆ 6039, 25 ವರ್ಷದ ಮಹಿಳೆ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರು.
ರೋಗಿ ಸಂಖ್ಯೆ 6040, 39 ವರ್ಷದ ಪುರುಷ ಇವರು ಜಾಲಿನಗರದವರಾಗಿದ್ದು, ರೋಗಿ ಸಂಖ್ಯೆ-1485 ರ ಸಂಪರ್ಕಿತ ರಾಗಿದ್ದಾರೆ. ಹಾಗೂ ರೋಗಿ ಸಂಖ್ಯೆ 6041, 40 ವರ್ಷದ ಮಹಿಳೆ ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇವರು ಸಿ.ಜೆ. ಆಸ್ಪತ್ರೆಯ ಡಿ ದರ್ಜೆ ನೌಕರರಾಗಿದ್ದಾರೆ. ರೋಗಿ ಸಂಖ್ಯೆ 4083, 4084, 4087, 4088, 4090, 4019, 4092 ಮತ್ತು 3977 ಇವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.