ಮಾಹಿತಿ ಕೊರತೆಯಿಂದ ವಾರಿಯರ್ಸ್‌ಗೆ ಸೋಂಕು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ, ಜೂ.8 -ಮಾಹಿತಿ ಕೊರತೆ ಯಿಂದ ಕೊರೊನಾ ವಾರಿಯರ್ಸ್‌ಗಳಿಗೆ ಸೋಂಕು ತಗುಲಿರಬಹುದು ಎಂದು ಡಿಸಿ  ಮಹಾಂತೇಶ ಬೀಳಗಿ ಅಭಿಪ್ರಾಯಿಸಿದರು.

ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾರಿಯರ್ಸ್‌ಗೆ ಸೋಂಕು ತಗುಲಿರು ವುದನ್ನು ಎಕ್ಸ್‌ಪರ್ಟ್ ಕಮಿಟಿಯಿಂದ ಪತ್ತೆ ಹಚ್ಚಲು ಪ್ರಯತ್ನಿಸಿದ್ದೇವೆ.  ಸೋಂಕು ರೋಗಿಗಳಿ ರುವ ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸುವ ನರ್ಸ್‌ಗಳು ಹಾಗೂ ಅಲ್ಲಿನ ಅಟೆಂಡರ್‌ಗಳು ಪಿಪಿಇ ಕಿಟ್ ತೆಗೆದು ಜ್ಯೂಸ್ ಅಥವಾ ನೀರು ಕುಡಿದಿರುವುದರಿಂದ ಸೋಂಕು ಬಂದಿರಬ ಹುದು. ಎಲ್ಲಾ ವೈದ್ಯರು ಹಾಗೂ ನರ್ಸ್‌ಗಳಿಗೆ  ಸೋಂಕು ಇರುವ ವಾರ್ಡುಗಳಿಗೆ ಹೋಗುವಾಗ ಕಿಟ್‌ಗಳನ್ನು ಧರಿಸುವುದು ಹಾಗೂ ಕಳಚುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ತರಬೇತಿಯನ್ನು ಮತ್ತೊಮ್ಮೆ ನೀಡಲಾಗಿದೆ. ಈಗಾಗಲೇ ಸೋಂಕಿತ ವಾರಿಯರ್ಸ್‌ಗಳನ್ನು  ಪ್ರತ್ಯೇಕವಾಗಿ ಐಸೋ ಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗು ವುದು ಎಂದರು.

ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್‌ನಲ್ಲಿಡಲಾ ಗುತ್ತಿದೆ. ಅದಕ್ಕಾಗಿಯೇ ಒಂದು ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದರು.

error: Content is protected !!