ದೇಶವನ್ನೇ ಅಡ ಇಡುವ ಮೋದಿ, ಪದವಿ ತೊರೆಯಲಿ

ದೇಶವನ್ನೇ ಅಡ ಇಡುವ ಮೋದಿ, ಪದವಿ ತೊರೆಯಲಿ - Janathavaniದಾವಣಗೆರೆ, ಜೂ. 8- ಭಾರತೀಯ ರೈತರ ಪರವಾಗಿ, ದೇಶದ ಹಿತದೃಷ್ಟಿಯಿಂದ ಕಾರ್ಯ ಕ್ರಮಗಳನ್ನು ಯಶಸ್ವಿ ಗೊಳಿಸುವಲ್ಲಿ ಎಲ್ಲಾ ರಂಗಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಇಡೀ ದೇಶವನ್ನೇ ವಿದೇಶಿಯರಿಗೆ ಅಡ ಇಡುವ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿಯವರು ತಮ್ಮ ಪದವಿಯಿಂದ ಕೆಳಗಿಳಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ. 

ಇಂದಿಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ದೇಶವನ್ನು ಪರಕೀಯ ವಿದೇಶಿ ಕಂಪೆನಿಗಳಿಗೆ ಕೊಟ್ಟು ಹಣ ಹೆಕ್ಕುವಂತಹ ಕೆಲಸ ಮಾಡಲಾಗುತ್ತಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯಲ್ಲಿ ಕಾರ್ಪೊರೇಟ್ ಮತ್ತು ಎನ್‍ಎಂಸಿ ಕಂಪೆನಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.  ನಂತರ ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಲು ಎಪಿಎಂಸಿ ಕಾಯ್ದೆ ಕಾಲಂ 8ನ್ನು ಬದಲಾಯಿಸಿ, ಕಂಪನಿಗಳಿಗೆ ಎಪಿಎಂಸಿ ಕಾಯ್ದೆ, ಕಾನೂನು ಪಾಲನೆ ಮಾಡುವ ಅವಶ್ಯಕತೆ ಇಲ್ಲದ ರೀತಿ ಖಾಸಗಿ ಮಾರುಕಟ್ಟೆ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ. ಆ ಮೂಲಕ ರೈತರದ್ದೇ ಸಂಸ್ಥೆಯಾದ ಎಪಿಎಂಸಿಯನ್ನು ಸಂಪೂರ್ಣ ಬಾಗಿಲು ಮುಚ್ಚಿ ಕಂಪನಿಗಳಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. 

ಇನ್ನು ಗ್ರಾಹಕರ ಮಾರುಕಟ್ಟೆ ನಗರ, ಮಹಾನಗರಗಳಲ್ಲಿನ ಮಾರು ಕಟ್ಟೆಯನ್ನು ಆಧುನಿಕ ಮಾರುಕಟ್ಟೆ ಎಂಬ ಹೆಸರಿನಲ್ಲಿ ಮಹಲ್ ಸಂಸ್ಕೃತಿಯನ್ನು ತೆರೆಯುವ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಕಂಪನಿಗಳಿಗೆ ಅವಕಾಶ ನೀಡಲಾಗಿದೆ ಎಂದು ಆಕ್ಷೇಪಿಸಿದರು. 

ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ವಿತರಣೆ, ಬಂದರು ನಿರ್ವಹಣೆ ಜವಾಬ್ದಾರಿ, ವಿಮಾನ ನಿಲ್ದಾಣ ನಿರ್ವಹಣೆ, ರಕ್ಷಣಾ ಇಲಾಖೆ ಯುದ್ಧ ಸಾಮಗ್ರಿಗಳ ಉತ್ಪಾದನೆ, ಅಂತರಿಕ್ಷ ಉಡಾವಣೆ, ಬಾಹ್ಯಾಕಾಶ ಸಂಶೋಧನೆ ಕಾರ್ಯಕ್ಷೇತ್ರ ಹೀಗೆ ದೇಶದ ಸರ್ವಾಂಗವನ್ನೇ ಕೊರೊನಾ ನೆಪವೊಡ್ಡಿ ಸಂಪೂರ್ಣ ವಿದೇಶಿ ಬಂಡವಾಳ, ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಖಾಸಗೀಕರಣಕ್ಕೆ ಅವಕಾಶ ನೀಡಲಾಗುತ್ತಿದೆ. ಆ ಮುಖೇನ ದೇಶದ ಸ್ವಾತಂತ್ರ್ಯ ನಾಶದ ಜೊತೆಗೆ ದೇಶದ ಆರ್ಥಿಕತೆಯನ್ನೇ ವಿದೇಶಿ ಕಂಪನಿ ಕೈಗೆ ಧಾರೆ ಎರೆಯುವ ಅಪಾಯಕಾರಿ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಬಂದಿದೆ ಎಂದು ಅಸಮಾಧಾನಗೊಂಡರು.

ಕೊರೊನಾ ಸಂದರ್ಭದಲ್ಲಿ ರೈತರನ್ನು ಕಾಪಾಡಿಲ್ಲ. ಎಲ್ಲ ನಗರ ಪ್ರದೇಶಗಳಲ್ಲಿ ಇದ್ದಂತಹ ಕೂಲಿ ಕಾರ್ಮಿಕರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಯಾರೋ ದೆಹಲಿಯಿಂದ ಅಹಮದಬಾದ್‍ನ ಲ್ಲಿರುವ ಕುಟುಂಬವನ್ನು ಕರೆದುಕೊಂಡು ಹೋ ಗಲು ವಿಮಾನ ಕೊಡ್ತೀರಾ. ಆದರೆ, ಸಾಮಾನ್ಯ ಜನ ಪ್ರಯಾಣ ಮಾಡಲು ರೈಲು ಸಕಾಲದಲ್ಲಿ ಸಂಚರಿಸುವಂತೆ ಮಾಡದೇ ಇಡೀ ದೇಶದಲ್ಲಿ ದುಡಿಯುವ ಜನರನ್ನು ಅಲೆಮಾರಿಗಳಂತೆ ಓಡಾ ಡಿಸಿದ್ದೀರ. ಇಂತಹ ಜನವಿರೋಧಿ ನಡವಳಿಕೆಗ ಳಿಗೆ ರೈತ ಸಂಘ ಖಂಡಿಸಲಿದೆ. ದೇಶವನ್ನು ವಿದೇ ಶಗಳಿಗೆ ಅಡ ಇಡುವ ಬದಲಿಗೆ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರೈತ ಸಂಘ ದೇಶದ ಎರಡನೇ ಸ್ವತಂತ್ರ ಚಳವಳಿಯ ಹೋ ರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.

error: Content is protected !!