ದಾವಣಗೆರೆ, ಜೂ.4- ಉಪ್ಪಾರ ಅಭಿವೃದ್ಧಿ ನಿಗಮಕ್ಕೂ 100 ಕೋಟಿ ರೂ. ಅನುದಾನ ನೀಡಿ, ಉಪ್ಪಾರ ಸಮಾಜದ ಅಭಿವೃದ್ಧಿಗೆ ಸಹಕರಿಸುವಂತೆ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.
ರಾಜ್ಯದಲ್ಲಿ 35 ರಿಂದ 45 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ರಾಜಕೀಯ ಪಕ್ಷಗಳು ಕೇವಲ ಮತಗಳಿಗೆ ಸೀಮಿತವಾಗಿ, ಭರವಸೆ ನೀಡಿ, ಚುನಾವಣೆ ನಂತರ ಯಾವುದೇ ಅಧಿಕಾರ ನೀಡದೇ, ವಂಚನೆ ಮಾಡುತ್ತವೆ ಎಂದು ಮಹಾಸಭಾ ರಾಜ್ಯಾಧ್ಯಕ್ಷ ವಿಷ್ಣು ಲಾತೂರ್ ಬೆಳಗಾವಿ, ಕಾರ್ಯಾಧ್ಯಕ್ಷ ಭರತ್ ಎಸ್.ಮೈಲಾರ್ ದೂರಿದ್ದಾರೆ. ಉಪ್ಪಾರ ನಿಗಮ ಮಂಡಳಿಗೂ ಅಧ್ಯಕ್ಷರ ನ್ನಾಗಲೀ, ಸದಸ್ಯರನ್ನಾಗಲೀ ನೇಮಕ ಮಾಡುತ್ತಿಲ್ಲ. ಬಿಜೆಪಿಯಾದರೂ ಉಪ್ಪಾರ ಸಮಾಜಕ್ಕೆ ನ್ಯಾಯ ಕಲ್ಪಿಸಲಿ ಎಂದು ಅವರು ಆಗ್ರಹಿಸಿದ್ದಾರೆ.