ದಾವಣಗೆರೆ, ಜೂ.2- ಕೇಂದ್ರ ಸರ್ಕಾರವು ಕೃಷಿ ಉತ್ಪನ್ನ ವೆಚ್ಚ ಮತ್ತು ಬೆಲೆಗಳಿಗೆ ಆಯೋಗದ ಶಿಫಾರಸ್ಸಿನಂತೆ 14 ಪ್ರಮುಖ ಕೃಷಿ ಉತ್ಪನ್ನಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಸಾಮಾನ್ಯ ದರ್ಜೆಯ ಭತ್ತದ ಬೆಲೆ ಕ್ವಿಂಟಾಲ್ಗೆ 1868 ರೂ. ಆಗುತ್ತದೆ. ಅದೇ ರೀತಿ ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ ಧಾನ್ಯಗಳಿಗೆ, ಎಣ್ಣೆ ಕಾಳುಗಳಿಗೆ, ಬೇಳೆ ಕಾಳುಗಳಿಗೆ ಗಣನೀಯ ಪ್ರಮಾಣದಲ್ಲಿ ಕ್ವಿಂಟಾಲ್ಗೆ ಕನಿಷ್ಠ ರೂ.200 ರಿಂದ ರೂ.775 ಗಳವರೆಗೆ ಹೆಚ್ಚಿಸಿರುವುದನ್ನು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರವು ಒರಟು ಧಾನ್ಯಗಳ ಭತ್ತ ಮತ್ತು ಇತರ ಒರಟು ಧಾನ್ಯಗಳ ಬೇಳೆ ಕಾಳುಗಳ ಮತ್ತು ಎಣ್ಣೆ ಕಾಳುಗಳ ಶಾಶ್ವತ ಬೆಂಬಲ ಬೆಲೆ ಖರೀದಿ ವ್ಯವಸ್ಥೆಯನ್ನು ಭಾರತದ ಆಹಾರ ನಿಗಮದ ಮೂಲಕ ವ್ಯವಸ್ಥೆ ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಆಗ್ರಹಿಸಿದ್ದಾರೆ.
November 23, 2024