ಹರಪನಹಳ್ಳಿ, ಮೇ 31- ಬಾಲಕನೊಬ್ಬನಿಗೆ ಕೊರೊನಾ ವೈರಸ್ ಇರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಬಾಣಗೇರಿಯನ್ನು ಸೀಲ್ ಡೌನ್ ಮಾಡಿ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
13 ವರ್ಷದ ಸೋಂಕಿತ ಬಾಲಕ ಹಾಗೂ ಆತನ ತಂದೆ ಗುಜರಾತ್ನಿಂದ ಆಗಮಿಸಿದಾಗ ಅಧಿಕಾರಿಗಳು ತೋರಣಗಲ್ ಬಳಿ ಕ್ವಾರಂಟೈನ್ನಲ್ಲಿ ಇಟ್ಟಿದ್ದರು. ತಂದೆಯ ಗಂಟಲ ದ್ರವ ಪರೀಕ್ಷೆ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ತಂದೆ ಜೊತೆ ಮಗನನ್ನು ಬಿಡುಗಡೆ ಮಾಡ ಲಾಗಿದೆ ಎಂದು ಹೇಳಲಾಗಿದೆ.
ಗುಜರಾತ್ನಿಂದ ಬಂದಿದ್ದ 13 ವರ್ಷದ ಬಾಲಕ : ಸೋಂಕು ದೃಢ ಪಟ್ಟ ಹಿನ್ನೆಲೆ ಯಲ್ಲಿ ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ದಾಖಲು
ಬಾಲಕ ಮೇ 30 ರಂದು ಬೆಳಿಗ್ಗೆ ಹರಪನಹಳ್ಳಿ ಪಟ್ಟಣದ ಬಾಣಗೇರಿ ನಿವಾಸಕ್ಕೆ ಆಗಮಿಸಿ ದ್ದು, ಇಂದು ಆತನ ಗಂಟಲ ದ್ರವ ಪರೀಕ್ಷೆ ವರದಿ ಬಂದಿದ್ದು, ಕೊರೊನಾ ಇರುವುದು ದೃಢ ಪಟ್ಟಿದೆ. ಭಾನುವಾರ ಸಂಜೆ ಸೋಂಕಿತ ಬಾಲಕನನ್ನು ಬಳ್ಳಾರಿ ಕೋವಿಡ್ ಆಸ್ಪತ್ರೆಗೆ
ಕಳಿಸಲಾಗಿದೆ. ಇತ್ತ ಬಾಣಗೇರಿ ಯಲ್ಲಿರುವ ಸೋಂಕಿತನ ಮನೆಯ 100 ಮೀಟರ್ ಸುತ್ತ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗುವುದು, ನಂತರ 900 ಮೀಟರ್ ಬಫರ್ ಜೋನ್ ಎಂದು ಘೋಷಿಸಲಾಗುವುದು ಎಂದು ತಹಶೀಲ್ದಾರ್ ಡಾ.ನಾಗವೇಣಿ ತಿಳಿಸಿದರು. ಸೋಂಕಿತನ ಮನೆ ಬಳಿ ರಾಸಾಯನಿಕ ಸಿಂಪರಣೆ ಮಾಡಲಾಗಿದ್ದು, ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಪತ್ತೆ ಕಾರ್ಯ ನಡೆದಿದ್ದು, ಸಂಬಂಧಪಟ್ಟ ಎಲ್ಲರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಅವರು ಹೇಳಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿಪಿಐ ಕುಮಾರ್, ಪಿಎಸ್ಐ ಪ್ರಕಾಶ್ ಕಂದಾಯ ಹಾಗೂ ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.