ದಾವಣಗೆರೆ, ಮೇ 29 – ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಅವಮಾನಿಸುವ, ಜಾತಿ ನಿಂದನಾತ್ಮಕ, ಸಮಾಜದಲ್ಲಿ ತಲೆ ಎತ್ತಿ ಬದುಕದಂತ, ಸ್ತ್ರೀತನಕ್ಕೆ ಧಕ್ಕೆ ತರುವ ತಪ್ಪು ಹೇಳಿಕೆಗಳನ್ನು ಹರಿಬಿಟ್ಟಿರು ವುದಾಗಿ ಆರೋಪಿಸಿ ನಗರದ ಕೊರೊನಾ ಸೋಂಕು ತಗುಲಿ ಸುದ್ದಿಯಾಗಿದ್ದ ನರ್ಸ್ ಫೇಸ್ ಬುಕ್ ಖಾತೆದಾರರೋರ್ವರ ವಿರುದ್ಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಇಂದು ದೂರು ದಾಖಲಿಸಿದ್ದಾರೆ.
ತಾನು ಸೇವೆ ಸಲ್ಲಿಸಿರುವ ಪ್ರಸೂತಿ ಕೇಂದ್ರವು ಬಡ ಕೂಲಿ ಕಾರ್ಮಿಕರು ವಾಸ ಮಾಡುವಂತಹ ಪ್ರದೇಶವಾಗಿದ್ದು, ಬಹಳಷ್ಟು ಬಡ ಜನರು ನಮ್ಮಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಾರ್ಯ ಅವಧಿಗಿಂತ ಮೀರಿದ ಪರಿಮಿತಿಯಲ್ಲಿ ಹೆಚ್ಚಿನ ಸಮಯ ಸೇವೆ ಸಲ್ಲಿಸುತ್ತಿದ್ದೆನು. ದುರಾದೃಷ್ಟವಶಾತ್ ಯಾರೋ ಒಬ್ಬ ರೋಗಿಯಿಂದ ಕೋವಿಡ್-19 ಸೋಂಕು ತಗಲಿದ್ದು, ಇಡೀ ನಗರದಲ್ಲಿ ದೊಡ್ಡ ಮಟ್ಟದಲ್ಲಿ ನನ್ನ ಹೆಸರು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಕೆಟ್ಟ ದಾಗಿ ಹೇಳಿಕೆಗಳು ಹರಿದಾಡ ತೊ ಡಗಿದವು ಎಂದು ನರ್ಸ್ ನೀಡಿರುವ ದೂರಿನಲ್ಲಿದೆ.
ತಾನು ಗುಣಮುಖಳಾಗಿ ಬಿಡು ಗಡೆಯಾ ದಂತಹ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಸಹ್ಯಕರ ಜಾತಿ ನಿಂದನಾತ್ಮಕ ಹಾಗೂ ತನ್ನ ಸ್ತ್ರೀತನಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಅಪ್ಲೋಡ್ ಮಾಡಿದ್ದಾರೆ. `ವಂದು ವಾಣಿ’ ಎಂಬ ಫೇಸ್ ಬುಕ್ ಖಾತೆಯಿಂದ ನನ್ನ ಹೆಸರನ್ನು ಉಲ್ಲೇಖಿಸಿ ಕೆಟ್ಟದಾಗಿ ಹೇಳಿಕೆಗಳನ್ನು ಹರಿಬಿಟ್ಟ ಕಾರಣ ಇತರೇ ಶುಶ್ರೂಷಕರಿಗೂ ಸೇವಾ ಭದ್ರತೆ ಇಲ್ಲದೇ ಭಯದಲ್ಲಿ ಬದುಕುವಂತಾಗುತ್ತದೆ. ತನ್ನಂತೆ ಇತರರಿಗೂ ಮಾನಹಾನಿಯಾಗಬಾರದೆಂದು ಹಾಗೂ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸಿಗೆ ನೋವು, ಅವಮಾನ, ಸಮಾಜದಲ್ಲಿ ತಲೆ ಎತ್ತಿ ಬದುಕದಂತೆ, ಸ್ತ್ರೀತನಕ್ಕೆ ಧಕ್ಕೆ ತರುವಂತೆ, ಜಾತಿ-ಜಾತಿಗಳ ಮಧ್ಯೆ ವೈಷಮ್ಯ ಹುಟ್ಟುವಂತೆ ಪೋಸ್ಟ್ ಮಾಡಿದ ವಂದು ವಾಣಿ ಹಾಗೂ ಪೋಸ್ಟ್ ಗಳಿಗೆ ಚಾಟಿಂಗ್ ಮಾಡಿದವರ ಮೇಲೂ ಕಾನೂನು ಕ್ರಮಕೈಗೊಳ್ಳಲು ದೂರಿನಲ್ಲಿ ಮನವಿ ಮಾಡಲಾಗಿದೆ.