ದಾವಣಗೆರೆ – ಹರಿಹರ ಅರ್ಬನ್ : ಸಾಲಗಳ ಬಡ್ಡಿ ದರದಲ್ಲಿ ಶೇ. 1 ರಿಯಾಯಿತಿ

ದಾವಣಗೆರೆ,ಮೇ 27- ಜಿಲ್ಲೆಯ ಪ್ರತಿಷ್ಠಿತ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನಿಂದ ಎಲ್ಲಾ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಶೇ.1ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗತ್ತಿನಾದ್ಯಂತ ಹರಡಿರುವ ಕೊರೊನಾ ವೈರಸ್ ಕಾರಣದಿಂದ ಆಗಿದ್ದ ಲಾಕ್ ಡೌನ್ ಪರಿಣಾಮ ಸಾರ್ವಜನಿಕರು ಮತ್ತು ವರ್ತಕರಿಗಾಗಿರುವ ತೊಂದರೆಯ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕ್ ಈ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಸಾಲ ನೀಡಿದ ಸಂಸ್ಥೆಗಳು ಅವಧಿ ಪಡೆದ ಸಾಲಗಾರರಿಗೆ 6 ಕಂತುಗಳ ಋಣ ವಿಳಂಬನೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದನ್ವಯ ತಮ್ಮ ಬ್ಯಾಂಕಿನ ಎಲ್ಲಾ ವರ್ಗಗಳ ಸಾಲಗಾರರಿಗೆ ಶೇ.1ರಷ್ಟು ರಿಯಾಯಿತಿ ನೀಡಲಾಗಿದೆ ಎಂದರು.

ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ, ಉತ್ತಮ ಸಾಲಗಾರರ ಹಿತದೃಷ್ಟಿಯಿಂದ ಮತ್ತು ಬ್ಯಾಂಕಿನ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುರುಗೇಶ್ ವಿವರಿಸಿದ್ದಾರೆ. 

ತಮ್ಮ ಬ್ಯಾಂಕ್ ಕೈಗೊಂಡಿರುವ ತೀರ್ಮಾನದನ್ವಯ ಬ್ಯಾಂಕಿನ ಸದಸ್ಯರು ಮತ್ತು ಸಾಲ ಪಡೆದವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ಉಪಾಧ್ಯಕ್ಷ ಕಿರುವಾಡಿ ವಿ. ಸೋಮಶೇಖರ್ ಕೋರಿದ್ದಾರೆ.

ನಿರ್ದೇಶಕರುಗಳಾದ ರಮಣ್ ಲಾಲ್ ಪಿ.ಸಂಘವಿ, ಎಸ್.ಕೆ. ವೀರಣ್ಣ, ಎ.ಹೆಚ್. ಕುಬೇರಪ್ಪ, ಶ್ರೀಮತಿ ಜಯಮ್ಮ ಪರಶು ರಾಮಪ್ಪ, ಕೃಷ್ಣ ಸಾ ಭೂತೆ, ಶಂಕರ್ ಖಟಾವ್ ಕರ್, ಎಸ್.ಕೆ. ಪ್ರಭುಪ್ರಸಾದ್, ಶ್ರೀಮತಿ ಪಿ.ಎಂ. ಶಶಿಕಲಾ ರುದ್ರಯ್ಯ, ಕೆ.ಎಂ. ಜ್ಯೋತಿಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ. ನಾಗೇಂ ದ್ರಚಾರಿ, ಕೆ.ಹೆಚ್. ಶಿವಯೋಗಪ್ಪ, ಶ್ರೀಮತಿ ಅನಿಲಾ ಇಂಧೂದರ್ ನಿಶಾನಿಮಠ್, ವೃತ್ತಿಪರ ನಿರ್ದೇಶಕರು ಗಳಾದ ಹೆಚ್.ಬಿ. ತಿಪ್ವೇಸ್ವಾಮಿ, ಎಸ್.ಎಸ್. ಸಾಲಿಮಠ, ವಿಶೇಷ ಆಹ್ವಾನಿತರುಗಳಾದ ಎಂ.ಎಸ್. ರಾಮಚಂದ್ರ, ಅಜ್ಜಂಪುರ ಶೆಟ್ರು  ಸಿದ್ದರಾಮಣ್ಣ (ರಾಜು) ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗ ಸ್ವಾಮಿ ವಿಷಯ ಮಂಡಿಸಿದರು.

error: Content is protected !!