ವಸತಿ ಮತ್ತು ವಾಣಿಜ್ಯದ ಕಂದಾಯ ಪರಿಷ್ಕರಣೆ ಕೈಬಿಡಲು ಸಾಧ್ಯವಿಲ್ಲ. ಹೆಚ್ಚಿಸಿರುವ ಕಂದಾಯದಲ್ಲಿ ಕಡಿಮೆ ಮಾಡಲು ಕ್ರಮ
ದಾವಣಗೆರೆ,ಮೇ 26- ಇದೇ ದಿನಾಂಕ 30ರೊಳಗೆ ಮಹಾನಗರ ಪಾಲಿಕೆಯ ಕಂದಾಯ ಪಾವತಿಸಿದವರಿಗೆ ನೀಡಲಾಗಿದ್ದ ಶೇ. 5ರಷ್ಟು ರಿಯಾಯಿತಿ ಯನ್ನು ಬರುವ ಜೂನ್ 30ರವರೆಗೆ ವಿಸ್ತರಿಸುವುದರ ಮೂಲಕ ಸಾರ್ವಜನಿಕ ರಿಗೆ ಅನುಕೂಲ ಮಾಡಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ (ಭೈರತಿ) ಭರವಸೆ ನೀಡಿದ್ದಾರೆ.
ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಮಾಡಿಕೊಂಡ ಮನವಿ ಮೇರೆಗೆ ಸಚಿವರು ಈ ಆಶ್ವಾಸನೆ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ಮತ್ತು ಕಾಂಗ್ರೆಸ್ ಸದಸ್ಯ ದೇವರಮನೆ ಶಿವಕುಮಾರ್ ಅವರುಗಳು `ಜನತಾವಾಣಿ’ಗೆ ತಿಳಿಸಿದ್ದಾರೆ.
ನಗರ ಪಾಲಿಕೆಯಲ್ಲಿ ಇಂದು ಏರ್ಪಾಡಾಗಿದ್ದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರನ್ನು ಭೇಟಿ ಮಾಡಿ ಸಲ್ಲಿಸಿದ್ದ ಲಿಖಿತ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಲಾಕ್ ಡೌನ್ ನಿಂದ ನಾಗರಿಕರು ತೊಂದರೆಗೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ಕಂದಾಯ ಪಾವತಿಗೆ ಮತ್ತೊಂದು ತಿಂಗಳ ಕಾಲ ರಿಯಾಯಿತಿಗೆ ಅವಕಾಶ ನೀಡುವುದಾಗಿ ಹೇಳಿದರು. ಮನೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದಂತೆ ಕಂದಾಯ ವನ್ನು ಹೆಚ್ಚಿಸಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ, ಲಾಕ್ ಡೌನ್ ಪರಿ ಣಾಮ ಸಾರ್ವ ಜನಿಕರು ಸಂಕಷ್ಟ ಕ್ಕೊಳಗಾಗಿದ್ದು, ಹೆಚ್ಚಿಸಿರುವ ಕಂದಾಯವನ್ನು ಕಡಿಮೆ ಮಾಡು ವುದಲ್ಲದೇ, ಈ ಬಾರಿ ಪರಿಷ್ಕ ರಣೆ ಮಾಡದಂತೆ ಮುಂದೂಡ ಬೇಕು ಎಂದು ಮಾಡಿಕೊಂಡ ಮನವಿಯನ್ನು ಸಚಿವರು ತಳ್ಳಿ ಹಾಕಿದರು.
ವಸತಿಗೆ ಶೇ. 18 ರಷ್ಟು ಮತ್ತು ವಾಣಿಜ್ಯಕ್ಕೆ ಶೇ. 24ರಷ್ಟು ಕಂದಾಯ ಹೆಚ್ಚಿಸಿರು ವುದು ಸಮಂಜಸವಲ್ಲ ಎಂದು ವಿಪಕ್ಷ ಸದಸ್ಯರು ಹೇಳಿದಾಗ, ಪ್ರತಿ ಮೂರು ವರ್ಷಕ್ಕೊಮ್ಮೆ ಕಂದಾಯ ಪರಿಷ್ಕರಣೆ ಮಾಡಬೇ ಕಿದ್ದು, ಅದರಂತೆ ಹೆಚ್ಚಿಸಲಾಗಿದೆ ಎಂದರು. ಏರಿಕೆ ಮಾಡಿರುವ ಕಂದಾಯದಲ್ಲಿ ವಸತಿಗೆ ಶೇ. 15ರಂತೆ ಹಾಗೂ ವಾಣಿಜ್ಯಕ್ಕೆ ಶೇ.20ರಷ್ಟು ಮಾಡುವಂತೆ ಕೇಳಿಕೊಂಡಾಗ, ಈ ಬಗ್ಗೆ ಸಂಬಂಧಿಸಿದ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.