ಜಿಲ್ಲೆಯ ನಾಲ್ವರಿಗೆ ಕೊರೊನಾ : 18 ಜನರು ಗುಣಮುಖ, ಬಿಡುಗಡೆ

ದಾವಣಗೆರೆ, ಮೇ 24- ಕೊರೊನಾ ಸೋಂಕು ಇಂದು ನಾಲ್ಕು ಜನರಲ್ಲಿ ದೃಢ ಪಟ್ಟಿದ್ದು ಸಕ್ರಿಯ ಕೊರೊನಾ ಪಾಸಿ ಟಿವ್ ಪ್ರಕರಣಗಳ ಸಂಖ್ಯೆ 75 ಆಗಿದೆ.

ಇಂದು ಕೊರೊನಾ ಸೋಂಕಿಗೆ ಒಳಗಾದವರನ್ನು ರೋಗಿ ಸಂಖ್ಯೆ 1962(60)ಮಹಿಳೆ, ಪಿ-1963(33)ಮಹಿಳೆ, ಪಿ-1964(33)ಮಹಿಳೆ. ಪಿ-1992(70)ಮಹಿಳೆ ಎನ್ನಲಾಗಿದೆ.

ಭಾನುವಾರ ಸೋಂಕಿನಿಂದ ಮುಕ್ತ ರಾದ ಒಟ್ಟು 18 ಮಂದಿಯನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗಿದೆ. ಇದರೊಂದಿಗೆ ಒಟ್ಟು ಗುಣಮುಖ ರಾದವರ ಸಂಖ್ಯೆ 46.

ರೋಗಿ ಸಂಖ್ಯೆ 621, 624, 627, 632, 663, 667, 669, 670, 671, 695, 724, 725, 726, P-728, 730, 731, 847 ಮತ್ತು 850 ಇಂದು ಬಿಡುಗಡೆಗೊಂಡಿದ್ದಾರೆ.

ಸಿ.ಜಿ.ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಗುಣಮುಖರಾದ ವರನ್ನು ಚಪ್ಪಾಳೆ ತಟ್ಟಿ ಶುಭ ಹಾರೈಸಿ ಬೀಳ್ಕೊಟ್ಟರು.

ಶಿವಕುಮಾರ ಸ್ವಾಮಿ ಬಡಾವಣೆ ಹೊಸ ಕಂಟೈನ್‌ಮೆಂಟ್‌ ವಲಯ

ರೋಗಿ ಸಂಖ್ಯೆ ಪಿ – 1852 ಹಿನ್ನೆಲೆಯಲ್ಲಿ ನಗರದ ಶಿವಕುಮಾರ ಸ್ವಾಮಿ ಬಡಾವಣೆಯನ್ನು ಕಂಟೈನ್‌ ಮೆಂಟ್ ವಲಯವಾಗಿ ಮಾಡಲಾಗಿದೆ.

ಈ ವಲಯಕ್ಕೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಎಂ. ದಾರುಕೇಶ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ. ಇದು ನಗರದ 13ನೇ ಹಾಗೂ ಜಿಲ್ಲೆಯ 14ನೇ ಕಂಟೈನ್‌ಮೆಂಟ್‌ ವಲಯವಾಗಿದೆ. 

ಹೊಸ ಕಂಟೈನ್‌ಮೆಂಟ್‌ ವಲಯದಲ್ಲಿ 30 ಮನೆಗಳಿದ್ದು, ಇಲ್ಲಿನ ಜನಸಂಖ್ಯೆ 110 ಆಗಿದೆ. ಇದರ ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್‌ ಝೋನ್‌ ಎಂದು ಪರಿಗಣಿಸ ಲಾಗಿದೆ ಎಂದು ಜಿಲ್ಲಾಡಳಿತದ ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!