ದಾವಣಗೆರೆ, ಮೇ 19 – ಜಿಲ್ಲೆಯಲ್ಲಿ ಮಂಗಳವಾರ 22 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿ 106ಕ್ಕೆ ತಲುಪಿದೆ.
ಪತ್ರಿಕಾಗೋಷ್ಠಿಯಲ್ಲಿ ಕೊರೊನಾ ಸೋಂಕಿತರ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪತ್ತೆಯಾಗಿರುವ ಸೋಂಕಿತರಲ್ಲಿ ಬಹುತೇಕರು ಈಗಾಗಲೇ ಸೋಂಕಿತರ 54 ಬಸ್ಗಳು ಸಂಚಾರ ಮಾಡಿದ್ದವು. ನಾಳೆ ಇನ್ನೂ ಹತ್ತು ಬಸ್ಗಳನ್ನು ಬಿಡುವುದಾಗಿ ತಿಳಿಸಿದ್ದಾರೆ.
ಪ್ರತಿನಿತ್ಯ ಪ್ರಯಾಣಿಕರ ಬೇಡಿಕೆ ಹಾಗೂ ಅಗತ್ಯಗಳನ್ನು ಪರಿಗಣಿಸಿ ಹೆಚ್ಚಿನ ಬಸ್ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರಿಗೆ 2 ಗಂಟೆಯ ಬಸ್ ಕೊನೆಯದಾಗಿದೆ. ರಾಣೇಬೆನ್ನೂರು ಹರಪನಹಳ್ಳಿ ಸೇರಿದಂತೆ ಹತ್ತಿರದ ಊರುಗಳಿಗೆ ಐದು ಗಂಟೆಯ ಬಸ್ ಕೊನೆಯದಾಗಿದೆ. ಸಂಜೆ 6.30ಕ್ಕೆ ನಗರ ಬಸ್ ಸಂಚಾರ ನಿಲ್ಲಲಿದೆ ಎಂದವರು ವಿವರಿಸಿದ್ದಾರೆ.
ಕೆಲಸದ ಅಗತ್ಯ ಸೇರಿದಂತೆ ತುರ್ತು ಅಗತ್ಯ ಇರುವವರಿಗೆ ಬಸ್ ಸಂಚಾರಕ್ಕೆ ಅನುಮತಿ ನೀಡಿರು ವುದು ನೆರವಾಗುತ್ತಿದೆ. ಇಂದು ಬಸ್ ಸಂಚಾರ ಆರಂಭವಾಗಿದೆಯಾ ದರೂ, ನಿನ್ನೆಯೇ 96 ಟಿಕೆಟ್ಗಳು ಬುಕ್ ಆಗಿದ್ದವು. ಬೆಂಗಳೂರಿಗೆ ತೆರಳುವ ಎಲ್ಲ ಬಸ್ಗಳು ಭರ್ತಿ ಆಗಿದ್ದವು ಎಂದವರು ಹೇಳಿದ್ದಾರೆ.
ಶಿವಮೊಗ್ಗಕ್ಕೆ ಏಳು, ರಾಣೇ ಬೆನ್ನೂರಿಗೆ ಮೂರು, ಹರಪನ ಹಳ್ಳಿಗೆ ಐದು ಬಸ್ಗಳು ತೆರಳಿವೆ. ಆದರೆ, ಗ್ರಾಮಾಂತ ರದಿಂದ ಬಸ್ಗಳಿಗೆ ಯಾವುದೇ ಬೇಡಿಕೆ ಕೇಳಿ ಬಂದಿಲ್ಲ. ಹಾಗೊಂದು ವೇಳೆ ಬಸ್ ಬೇಡಿಕೆ ಬಂದರೆ ಆ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದೇಶ್ವರ ಹೇಳಿದ್ದಾರೆ.
ಮಧ್ಯಾಹ್ನದವರೆಗೆ ನಗರದಿಂದ 391 ಪ್ರಯಾಣಿ ಕರು ತೆರಳಿದ್ದಾರೆ. ಹರಿಹರ ದಿಂದ 649 ಪ್ರಯಾಣಿಕರು ತೆರಳಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೊರೊನಾ ಕಟ್ನಿಂದ ಮುಕ್ತಿ : ಕಟಿಂಗ್ ಷಾಪ್ಗಳು ಬಂದ್ ಆಗಿದ್ದರಿಂದ ಮನೆಗಳಲ್ಲೇ ಕೂದಲಿಗೆ ಕತ್ತರಿ ಬೀಳುತ್ತಿತ್ತು. ಟ್ರಿಮ್ಮರ್ ಇಲ್ಲವೇ ಶೇವಿಂಗ್ ಮೂಲಕ ಕೂದಲಿಗೆ ಮೋಕ್ಷ ನೀಡಲಾಗುತ್ತಿತ್ತು. ಇದೆಲ್ಲಾ §ಕೊರೊನಾ ಕಟ್¬ ಎಂದೂ ಹೆಸರಾಗಿತ್ತು. ಮಂಗಳವಾರದಂದು ಕಟಿಂಗ್ ಷಾಪ್ಗಳು ತೆರೆದ ಕಾರಣ ಸ್ವಯಂ ಕಟಿಂಗ್ಗೆ ತೆರೆ ಬಿದ್ದಿದೆ. ಆದರೆ, ಕಟಿಂಗ್ ಷಾಪ್ಗಳಲ್ಲಿ ಜನರು ವಿರಳವಾಗಿದ್ದರು. ಮಂಗಳವಾರವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಕ್ಷೌರಿಕ ವೃತ್ತಿಯ ಮಂಜುನಾಥ್ ಹೇಳಿದ್ದಾರೆ.
ಕೆಲವೆಡೆ ಗ್ರಾಹಕರು ಬಂದರೂ ಸಹ ಕಟಿಂಗ್ ಷಾಪ್ನವರೇ ಕೊರೊನಾಗೆ ಹೆದರಿ ಹಿಂಜರಿಯುತ್ತಿದ್ದಾರೆ. ನಾವೂ ಸಹ ಪರಿಚಯಸ್ಥರಿಗೆ ಮಾತ್ರ ಕಟಿಂಗ್ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಸಿಟಿ ಬಸ್ಗಳು ಖಾಲೀ ಖಾಲಿ : ಕೆ.ಎಸ್.ಆರ್.ಟಿ.ಸಿ. ವತಿಯಿಂದ ಸಿಟಿ ಬಸ್ಗಳಿಗೆ ಚಾಲನೆ ನೀಡಲಾಗಿತ್ತು. ಹತ್ತು ಬಸ್ಗಳಿಗೆ ಅನುಮತಿ ನೀಡಿದರೂ ಸಹ, ಅವುಗಳು ಖಾಲಿ ಹೊಡೆಯುತ್ತಿದ್ದವು. ಕೆಲವು ಬಸ್ಗಳಲ್ಲಿ ಒಬ್ಬಿಬ್ಬರು ಮಾತ್ರ ಪ್ರಯಾಣಿಸುತ್ತಿದ್ದುದು ಕಂಡು ಬಂದಿತು. ಸಿಟಿ ಬಸ್ನಲ್ಲಿ ಪ್ರಯಾಣ ಮಾಡುವವರಿಗೆ ರೈಲ್ವೆ ನಿಲ್ದಾಣದ ಎದುರಿನ ಬಸ್ ತಂಗುದಾಣದಲ್ಲಿ ಥರ್ಮಲ್ ಟೆಸ್ಟ್ ಮಾಡಲಾಗುತ್ತಿತ್ತು.
ನಗರದ ಹಲವಾರು ಪ್ರದೇಶಗಳು ಲಾಕ್ಡೌನ್ ಆಗಿವೆ. ಇದರಿಂದಾಗಿ ಸಾರಿಗೆ ಬಸ್ಗಳು ಹಳೆ ಭಾಗಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ. ಬಡವರು ಹೆಚ್ಚಾಗಿ ಸಿಟಿ ಬಸ್ ಅವಲಂಬಿಸಿದ್ದರು. ಕಾರ್ಖಾನೆಗಳು ಚಾಲನೆಗೊಳ್ಳದೇ ಅವರು ಹೊರಗೆ ಬರುತ್ತಿಲ್ಲ. ಅಲ್ಲದೇ, ಶಾಲಾ-ಕಾಲೇಜುಗಳು ಬಂದ್ ಆಗಿರುವುದೂ ಸಹ ಸಿಟಿ ಬಸ್ ಬೇಡಿಕೆ ಇಳಿಯಲು ಕಾರಣವಾಗಿದೆ.
ಟ್ಯಾಕ್ಸಿಗಳಿಗೂ ಚಾಲನೆ : ಟ್ಯಾಕ್ಸಿಗಳೂ ಸಹ ನಗರದಲ್ಲಿ ಕಾರ್ಯಾರಂಭ ಮಾಡಿವೆ. ನಗರದ ಯು.ಬಿ.ಡಿ.ಟಿ. ಕಾಲೇಜಿನ ಎದುರು ಟ್ಯಾಕ್ಸಿಗಳು ಸಾಲುಗಟ್ಟಿ ನಿಂತಿದ್ದವು. ಆದರೆ, ಗ್ರಾಹಕರು ನಿರೀಕ್ಷೆಯ ಪ್ರಮಾಣದಲ್ಲಿ ಬಂದಿಲ್ಲ ಎಂದು ಟ್ಯಾಕ್ಸಿ ಮಾಲೀಕರು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುವ ನಿರೀಕ್ಷೆ ಇದೆ. ಎರಡು ತಿಂಗಳಿನಿಂದ ಖಾಲಿ ಕುಳಿತಿದ್ದೆವು. ಈಗ ಒಂದಿಷ್ಟಾದರೂ ದುಡಿಯುವ ಆಶಾ ಭಾವನೆ ಮೂಡಿದೆ ಎಂದು ಹೇಳಿದ್ದಾರೆ.
ದುಬಾರಿ ತೆರಿಗೆ ಹಾಗೂ ವಿಮೆ ಪಾವತಿಸಿದ ನಂತರ ಖಾಲಿ ಕುಳಿತು ಕೊಳ್ಳುವುದೇ ಹೊರೆಯಾಗಿದೆ. ಸರ್ಕಾರದಿಂದ ನಮಗೆ ಇನ್ನೂ ಯಾವುದೇ ನೆರವು ದೊರೆತಿಲ್ಲ ಎಂದು ನಮ್ಮ ಚಾಲಕರ ಟ್ರೇಡ್ ಯೂನಿಯನ್ ಜಿಲ್ಲಾ ಘಟಕದ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಹೇಳಿದ್ದಾರೆ.
ಸುಮಾರು 40 ಸಾವಿರ ರೂ.ಗಳ ತೆರಿಗೆ ಹೊರೆ ನಮ್ಮ ಮೇಲೆ ಬಿದ್ದಿದೆ. ಸರ್ಕಾರ ಇದಕ್ಕೆ ವಿನಾಯಿತಿ ನೀಡಬೇಕು. ಸಂಕಷ್ಟದ ಸಮಯ ದಲ್ಲಿ ನಮಗೆ ನೆರವು ನೀಡಬೇಕು ಎಂದು ಬಾಷಾನಗರದ ಟ್ಯಾಕ್ಸಿ ಚಾಲಕ ನೂರ್ ಅಹಮದ್ ಹೇಳಿದ್ದಾರೆ.
ಬೀದಿಗಿಳಿದ ಆಟೋ : ನಗರದಲ್ಲಿ ನಿನ್ನೆಯಿಂದ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಆಟೋಗಳು, ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಮೇಲಿದ್ದವು. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಗ್ರಾಹಕರ ನಿರೀಕ್ಷೆಯಲ್ಲಿ ಹೆಚ್ಚಿನ ಆಟೋಗಳಿದ್ದವು.
ನಗರದ ಸಾಕಷ್ಟು ಪ್ರದೇಶಗಳು ಕಂಟೈನ್ಮೆಂಟ್ ವಲಯವಾಗಿವೆ. ಇದರಿಂದಾಗಿ ಬಾಡಿಗೆ ಸಿಗುವುದು ಕಡಿಮೆಯಾಗಿದೆ. ಜನರೂ ಸಹ ಇನ್ನೂ ಹೆಚ್ಚು ಮುಕ್ತವಾಗಿ ಹೊರಗೆ ಬರುತ್ತಿಲ್ಲ ಎಂದು ಆಟೋ ಚಾಲಕ ಚಂದ್ರಪ್ಪ ಹೇಳಿದ್ದಾರೆ.
ಮಂಗಳವಾರ ಸಾರ್ವಜನಿಕ ಸಾರಿಗೆ ಆರಂಭಗೊಂಡಿದೆಯಾ ದರೂ, ಜನರು ವಾಹನಗಳನ್ನು ಏರುವ ಪ್ರಮಾಣ ಕಡಿಮೆಯೇ ಇತ್ತು. ಕೊರೊನಾದ ಭೀತಿಯಿಂದ ಜನರು ಇನ್ನೂ ಸಂಪೂರ್ಣವಾಗಿ ಹೊರ ಬರದೇ ಇರುವುದು ಸ್ಪಷ್ಟವಾಗಿತ್ತು.