ಮಾನಸಿಕ ಕಾಯಿಲೆ ಇರುವ ಮಕ್ಕಳನ್ನು ಪೋಷಿಸುವುದು

ಮಕ್ಕಳಲ್ಲಿ ಮಾನಸಿಕ ಕಾಯಿಲೆಯ ಸಾಮಾನ್ಯ ಲಕ್ಷಣಗಳು :
1) ಮಕ್ಕಳ ಶಾಲೆಯ ಕಲಿಕೆ ಮತ್ತು ಸಾಧನೆಯ ಮೇಲೆ ಪ್ರಭಾವ ಬೀರಿರುವುದು.
2) ಮಕ್ಕಳು ಅಧಿಕ ಸಕ್ರಿಯತೆ ತೋರುವುದು.
3) ಮಕ್ಕಳು ತಮ್ಮ ಕೆಲಸದಲ್ಲಿ ಅಸಕ್ತಿಯನ್ನು ಕೇಂದ್ರೀಕರಿಸಲು ಕಷ್ಟವಾಗುವುದು.
4) ಮಕ್ಕಳು ಹೆಚ್ಚು ಚಿಂತಿತರಾಗಿರುವುದು ಅಥವಾ ಹೆಚ್ಚು ಆತಂಕ ಪಡುತ್ತಿರುವುದು.
5) ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಗಳು ಕಂಡು ಬಂದಿರುವುದು.
6) ಮಕ್ಕಳಲ್ಲಿ ಹಸಿವಿಲ್ಲದಿರುವುದು.
7) ಮಕ್ಕಳ ತೂಕದಲ್ಲಿ ಅನಿರೀಕ್ಷಿತ ಬದಲಾವಣೆಗಳು
8) ಮಕ್ಕಳಲ್ಲಿ ತಮ್ಮ ಸ್ನೇಹಿತರ ಮತ್ತು ಹವ್ಯಾಸಗಳ ಬಗ್ಗೆ ಆಸಕ್ತಿ ಕಡಿಮೆಯಾಗುವುದು.
9) ಮಕ್ಕಳ ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆಗಳು ಕಂಡು ಬಂದಿರುವುದು.
10) ಮಕ್ಕಳು ನಿಷೇಧಿತ ಮಾದಕ ಪದಾರ್ಥಗಳ ಅಥವಾ ಮದ್ಯಪಾನದ ಬಳಕೆ.

ಆಪ್ತ ಸಮಾಲೋಚನೆಯ ಸಲಹೆಗಳು :
ಮಕ್ಕಳಲ್ಲಿ ಉಂಟಾಗಿರುವ ನ್ಯೂನತೆಗಳ ಬಗ್ಗೆ ಮಾಹಿತಿ ಮತ್ತು ಕಾರಣಗಳನ್ನು ಕುರಿತು ಸೂಕ್ತವಾದ ಸಲಹೆಗಳೊಂದಿಗೆ ಹಾಗೂ ಆರೈಕೆಯೊಂದಿಗೆ ಮಕ್ಕಳಿಗೆ ಮತ್ತು ಪೋಷಕರ ಜವಾಬ್ದಾರಿಯನ್ನು ತಿಳಿಸಿ ಹೇಳುವುದು. ಇದು ಮಗುವಿನ ಸ್ಥಿತಿ, ಆಲೋಚನೆ ಮತ್ತು ಭಾವನೆಗಳ ಹಾಗೂ ಕ್ರಿಯೆಗಳ ಬಗ್ಗೆ ಕಲಿಯಲು ನೆರವಾಗುತ್ತದೆ.
ಮನೋರೋಗ ಮತ್ತು ಮಾನಸಿಕ ಚಿಕಿತ್ಸಾ ತಜ್ಞರು ಮಕ್ಕಳಲ್ಲಿ ಕಂಡು ಬರುವ ಸ್ಥಿತಿಗೆ ಅನುಸಾರವಾಗಿ, ಸರಿಯಾದ ಔಷಧಿಗಳನ್ನು ಬಳಸಿ ನೀಡುವ ಚಿಕಿತ್ಸೆ ಇದಾಗಿರುತ್ತದೆ. ಇಲ್ಲಿ ನೀಡುವ ಚಿಕಿತ್ಸೆ ಮಕ್ಕಳಲ್ಲಿರುವ ಮಾನಸಿಕ ಕಾಯಿಲೆಯ ವಿಧಾನವನ್ನು ಅವಲಂಭಿಸಿ ಪ್ರಚೋದಕಗಳು, ಖಿನ್ನತೆ ನಿರೋಧಕಗಳು ಆತಂಕ ನಿರೋಧಕ ಔಷಧಿಗಳು, ಮಾನಸಿಕ  ವಿರುದ್ಧ ನಿರೋಧಕ ಅಥವಾ ಭಾವನೆಗಳನ್ನು ಸ್ಥಿರಗೊಳಿಸುವಂತಹ ಔಷಧಿಗಳನ್ನು ಶಿಫಾರಸ್ಸು ಮಾಡುವುದು.
ಮಾನಸಿಕ ಕಾಯಿಲೆಯಿಂದ ಮಕ್ಕಳು ಹೊರಬರಲು ಪೋಷಕರು ಮಕ್ಕಳಿಗೆ ಹೇಗೆ ನೆರವಾಗಬಹುದು :
1) ಮಾನಸಿಕ ಕಾಯಿಲೆ ಇರುವ ಮಕ್ಕಳನ್ನು ಹೊಂದಿರುವುದು ಪೋಷಕರಿಗೆ ಒಂದು ಸವಾಲಾಗಿರುತ್ತದೆ. ನಿಮ್ಮ ಮಗುವಿನಲ್ಲಿ ಮಾನಸಿಕ ಕಾಯಿಲೆಯ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಿ ಮತ್ತು ಲಕ್ಷಣಗಳನ್ನು ನಿರ್ವಹಿಸಲು ಅವರಿಗೆ ನೆರವಾಗಬೇಕು.
2) ಪೋಷಕರು ಯಾವಾಗಲೂ ಸಕಾರಾತ್ಮಕವಾಗಿದ್ದು ಮಕ್ಕಳಲ್ಲಿ ವಿಶ್ವಾಸ ಹೊಂದಬೇಕು.
3) ನಿಮ್ಮ ಮಗುವಿನ ಚಿಕಿತ್ಸಕರೊಂದಿಗೆ ಮಾತನಾಡಿ ಮತ್ತು ಮಕ್ಕಳೊಂದಿಗೆ ಹೇಗೆ ವರ್ತಿಸುವುದು ಎಂಬುದು ಚರ್ಚಿಸಿ ತಿಳಿದುಕೊಳ್ಳಿ.
4) ಯಾವಾಗಲೂ ನಿಮ್ಮ ಮಕ್ಕಳ ದೃಢತೆ ಮತ್ತು ಸಾಮರ್ಥ್ಯಗಳನ್ನು ಪ್ರಶಂಸಿಸಿ ಮತ್ತು ಪ್ರೋತ್ಸಾಹಿಸಿ.
5) ಮಕ್ಕಳಿಗೆ ನಿಯಮಿತವಾದ ಸಮಯದಲ್ಲಿ ನಿದ್ರಿಸಲು ಮತ್ತು ಎಚ್ಚರವಾಗಲು ಅಭ್ಯಾಸ ಮಾಡಿಸಬೇಕು.
6) ಮಕ್ಕಳಿಗೆ ಆರಾಮ ಎನಿಸುವ ಮತ್ತು ವಿನೋದಮಯವಾದ ವಿಧಾನಗಳನ್ನು ಚಿಕಿತ್ಸಕರಿಂದ ತಿಳಿದುಕೊಂಡು ಪರಿಚಯಿಸಿ.
7) ಮಕ್ಕಳಿಗೆ ಚೆನ್ನಾಗಿ ಮಾಡುವ ಕೆಲಸ ಮತ್ತು ಚಟುವಟಿಕೆಗಳನ್ನು ಪರಿಚಯಿಸಿ, ಪ್ರೋತ್ಸಾಹಿಸಿ.
8) ಮಕ್ಕಳಿಗೆ ಕೌಟುಂಬಿಕ ಸಮಾಲೋಚನೆ ಮತ್ತು ಬೆಂಬಲದೊಂದಿಗೆ ಚಿಕಿತ್ಸಕರ ನೆರವನ್ನು ಪಡೆಯಿರಿ.
ಪೋಷಕರು ಮಕ್ಕಳ ಮಾನಸಿಕ ಕಾಯಿಲೆಯಿಂದ ಹೊರಬರಲು ಹೇಗೆ ನೆರವಾಗಬಹುದು :
1) ಪೋಷಕರು ಮೊದಲು ನಿಮ್ಮ ಆತಂಕಗಳನ್ನು ನಿರ್ವಹಿಸುವುದನ್ನು ಕಲಿತುಕೊಳ್ಳಿ. ನಂತರ ಮಕ್ಕಳಿಗೆ ನೀವು ಕಲಿಸುವಾಗ ಇದು ಒತ್ತಡಯುಕ್ತ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸ್ಪಂದಿಸಲು ನಿಮಗೆ ಸಹಾಯವಾಗುತ್ತದೆ.
2) ನಿಮ್ಮ ಮಕ್ಕಳು ಶಾಲೆಯಲ್ಲಿದ್ದರೆ ಶಿಕ್ಷಕರಿಗೆ ನಿಮ್ಮ ಮಗುವಿನ ನಡವಳಿಕೆ ಬಗ್ಗೆ ತಿಳಿಸಿ ಹೇಳಿ ಮತ್ತು ಈ ಮಾಹಿತಿಯನ್ನು ನಿಮ್ಮ ಮಗುವಿನ ಚಿಕಿತ್ಸಕರೊಂದಿಗೆ ವಿನಿಮಯ ಮಾಡಿಕೊಳ್ಳಿ.
3) ನಿಮ್ಮ ಮಕ್ಕಳಲ್ಲಿ ನಡವಳಿಕೆಯ ಬದಲಾವಣೆಗಳನ್ನು ತಿಳಿಯಲು ಆ ಶಾಲೆಯ ಶಿಕ್ಷಕರೊಂದಿಗೆ ನಿಯಮಿತವಾಗಿ ಮಾತನಾಡಿ ತಿಳಿದುಕೊಳ್ಳಿ.
4) ನಿಮ್ಮ ಮಕ್ಕಳು ಶಾಲೆಯಲ್ಲಿ ಯಶಸ್ವಿಯಾಗಲು, ನಿಮ್ಮ ಮಗುವಿನ ಅಗತ್ಯಗಳಿಗೆ ಅನುಗುಣವಾಗಿ ಶೈಕ್ಷಣಿಕ ಯೋಜನೆ ಅಭಿವೃದ್ಧಿಪಡಿಸಲು ನಿಮ್ಮ ಮಗುವಿನ ಶಿಕ್ಷಕರೊಂದಿಗೆ ಕೆಲಸಮಾಡಿ, ಸಹಕರಿಸಿ.
5) ಮಗುವಿನ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹೊಸ ಶಿಕ್ಷಕರು ಬರುತ್ತಾರೆ. ನಿಮ್ಮ ಮಕ್ಕಳು ಹೊಸ ತರಗತಿಗೆ ಬರುತ್ತಿದ್ದಂತೆ ನಿಮ್ಮ ಮಕ್ಕಳ ಮಾನಸಿಕ ಕಾಯಿಲೆಯ ಬಗ್ಗೆ ಆ ಶಾಲೆಯ ಶಿಕ್ಷಕರಿಗೆ ತಿಳಿಸಿ ಹೇಳಿ.


ಶ್ರೀ ಕರಿಬಸಯ್ಯ ಮಠದ ವೀ 
ಮನೋಚಿಕಿತ್ಸೆ ತಜ್ಞರು, ದಾವಣಗೆರೆ.
ಫೋ. : 94810 46501, 98806 30199

error: Content is protected !!