ದಾವಣಗೆರೆ,ಮೇ 12- ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ವ್ಯಾಪಾರಸ್ಥರಿಗೆ ಸಹಕರಿಸುವ ನಿಟ್ಟಿನಲ್ಲಿ ನಾಳೆ ಬುಧವಾರದಿಂದ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಜಿಲ್ಲಾ ರೈಸ್ ಮಿಲ್ ಮಾಲೀಕರ ಸಂಘದ ಕಾರ್ಯದರ್ಶಿಯೂ ಆದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಸ್ವಾಗತಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೆಂಪು ವಲಯದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಯನ್ನು ನಗರಕ್ಕೂ ಅನ್ವಯಿಸುವಂತೆ ವ್ಯಾಪಾರ ವಹಿವಾಟುಗಳಿಗೆ ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಅವರು ಅನುಮತಿ ನೀಡಿರುವುದು ವ್ಯಾಪಾರಸ್ಥರಲ್ಲಿ ಸಂತಸವನ್ನುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಸುದೀರ್ಘ 50 ದಿನಗಳ ಲಾಕ್ ಡೌನ್ ಪರಿಣಾಮ ವ್ಯಾಪಾರಸ್ಥರು ತತ್ತರಿಸಿ ಹೋಗಿದ್ದರು.
ಇದು ಇನ್ನೂ ಮುಂದುವರೆದಿದ್ದರೆ ಬ್ಯುಸಿನೆಸ್ ಬೇರೆ ಊರುಗಳಿಗೆ ಶಿಫ್ಟ್ ಆಗುವ ಆತಂಕ ವರ್ತಕ ಸಮೂಹದಲ್ಲಿ ಮೂಡಿತ್ತು ಎಂದು ಹೇಳಿರುವ ಬಕ್ಕೇಶಪ್ಪ, ಜಿಲ್ಲಾಡಳಿತದ ಕ್ರಮದಿಂದಾಗಿ ವ್ಯಾಪಾರಸ್ಥರು ಚೇತರಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ ಎಂದು ಹೇಳಿದ್ದಾರೆ.
February 25, 2025