ರೈತರು ಸಮಗ್ರ ಬೆಳೆಗಳ ಕೃಷಿಗೆ ಆಸಕ್ತಿ ವಹಿಸಬೇಕು

ಜಗಳೂರು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸುಲು

ಜಗಳೂರು, ಡಿ.24- ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ  ಯಥೇಚ್ಛವಾಗಿ ರೈತರು ಆಸಕ್ತಿ ತೋರಿಸುತ್ತಾರೆ. ಬದಲಾಗಿ ಸಮಗ್ರ ಬೆಳೆಗಳ ಕೃಷಿಗೆ ಆಸಕ್ತಿ ವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸುಲು ತಿಳಿಸಿದರು.

ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ  ಕೃಷಿ ಇಲಾಖೆ ಹಾಗೂ ತಾಲ್ಲೂಕು ಕೃಷಿಕ ಸಮಾಜ ವತಿಯಿಂದ  ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಣ್ಣಿನೊಂದಿಗೆ ಮಾತುಕತೆ ಎಂಬ ವಿಷಯ ಕುರಿತು ರೈತರಿಗೆ ಮಾಹಿತಿ ನೀಡಿದ ಅವರು, ರೈತರು ಭೂಮಿ ಗುಣಗಳನ್ನು  ತಿಳಿದುಕೊಳ್ಳಬೇಕು. ಕೊಟ್ಟಿಗೆ ಗೊಬ್ಬರ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಪ್ರಯೋಗಗಳು ಮತ್ತು ಕೃಷಿಯಲ್ಲಿ ಬದಲಾವ ಣೆಗಳ ಕುರಿತು ರೈತರು ಸಮಗ್ರ ಮಾಹಿತಿ, ಮಾರ್ಗದರ್ಶನ ತಜ್ಞರಿಂದ ಪಡೆದುಕೊಳ್ಳಬೇಕು. ರೈತಪರ ಹೋರಾಟಗಾರರು ಹಾಗೂ ಭಾರತದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್  ಇವರ ಹುಟ್ಟಿದ ದಿನದ ಅಂಗವಾಗಿ, ಪ್ರತಿವರ್ಷ ಈ ದಿನವನ್ನು ರೈತರ ದಿನವೆಂದು ಆಚರಿಸಲಾಗುತ್ತದೆ ಎಂದರು.

ಚದರಗೊಳ್ಳದ ಅರುಣ್ ಕುಮಾರ್ ತಾವು ಬೆಳೆದ ರೇಷ್ಮೆ ಮತ್ತು ವಿವಿಧ ಬೆಳೆಗಳ ಕುರಿತು ಮತ್ತು ಜೀವಾಮೃತ ಸಾವಯವ ಕುರಿತು ಅವರ ಅನುಭವ ಹಂಚಿಕೊಂಡರು. ಮಲೆ ಮಾಚಿಕೆರೆ ಯು.ಬಿ.ರಾಜಣ್ಣ ತಾವು ಬೆಳೆದ ಡ್ರ್ಯಾಗನ್ ಫ್ರೂಟ್ಸ್ ಕುರಿತು ಸಾಗುವಳಿ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತರಾದ ನಾಗರಾಜ್ ಮಾತನಾಡಿ, ಸಮಗ್ರ ಬೆಳೆಗಳನ್ನು ಬೆಳಿತೀವಿ ಆದರೆ ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣನ್ನು ಉಳಿಸಿ ಸಾವಯವ ಬೇಸಾಯಕ್ಕೆ ಬಳಸಬೇಕು ಎಂದು ಕರೆ ನೀಡಿದರು.

error: Content is protected !!