ಹರಿಹರ, ಡಿ.15- ಅಮಾಯಕರ ಬಿಡುಗಡೆಗೆ ಆಗ್ರಹಿಸಿ, ಶಾಂತಿಯುತ ಪ್ರತಿಭಟನೆ ವೇಳೆ ಉಪ್ಪಿ ನಂಗಡಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬಂಧಿತರ ಬಿಡುಗಡೆ ಮಾಡು ವಂತೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದೆ.
ಈ ವೇಳೆ ಮಾತನಾಡಿದ ಮುಖಂಡರು, ಸಂಘ ಪರಿವಾರದ ಏಜೆಂಟರಾಗಿ ಪೊಲೀಸರು ಕರ್ತವ್ಯ ವನ್ನು ಮಾಡಬೇಡಿ, ಅಧಿಕಾರ ಬಳಕೆ ಮಾಡಿ ಕೊಂಡು ಅಮಾಯಕರ ಮೇಲೆ ದೌರ್ಜನ್ಯ ಮಾಡು ವುದು ಸರಿಯಾದ ಬೆಳವಣಿಗೆಯಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಅಜರ್, ಸುಭಾನ್, ಸಮಿವುಲ್ಲಾ, ಜಬಿ, ನಿಜಾಮ್, ರಿಯಾಜ್, ಯೂಸುಫ್, ಆಸೀಫ್, ಶಫಿವುಲ್ಲಾ, ಮಹಮ್ಮದ್ ಸಮಿ ಮತ್ತಿತರರು ಉಪಸ್ಥಿತರಿದ್ದರು.