ದಾವಣಗೆರೆ, ಡಿ.13- ದಿವ್ಯ ಕಾಶಿ ಭವ್ಯ ಕಾಶಿ ನಿಮಿತ್ಯ ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ಇಂದು ಶಿವನ ಮಂದಿರಗಳಲ್ಲಿ ಸ್ವಚ್ಚತಾ ಕಾರ್ಯದ ಜೊತೆಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ದಾವಣಗೆರೆ, ಮಾಯಕೊಂಡ, ಚನ್ನಗಿರಿ, ಜಗಳೂರು, ಹೊನ್ನಾಳಿ, ಹರಿಹರ ನಗರ ಮತ್ತು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾ ಬಿಜೆಪಿಯ ವಿವಿಧ ಘಟಕಗಳಿಂದ ಎಲ್ಲಾ ಶಿವನ ದೇವಾಲಯಗಳಲ್ಲಿ ಅಭಿಷೇಕ, ಹೋಮ, ವಿಶೇಷ ಪೂಜೆ ಮಾಡಲಾಯಿತು. ಕಾರ್ಯಕರ್ತರು ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ನಗರದ ಶಿವ-ಪಾರ್ವತಿ ದೇವಸ್ಥಾನ, ಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದ ಪಾಲಿಕೆಯ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ, ದೇಶದ ರಕ್ಷಣೆ, ಜೊತೆಗೆ ಧಾರ್ಮಿಕ ಅಭಿವೃದ್ದಿಯನ್ನು ಕೈಗೊಂಡಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗಾಗಿ ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಕಾಶಿಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿದ ಪ್ರಧಾನಿಗಳು ಕಲುಷಿತಗೊಂಡಿದ್ದ ಗಂಗಾನದಿಯನ್ನು ಆಧುನಿಕ ತಂತ್ರಜ್ಞಾನದಿಂದ ಸಂಪೂರ್ಣ ಸ್ವಚ್ಛ ಮಾಡಲಾಗಿದೆ. ಹಿಂದೂಗಳ ಪವಿತ್ರ ಸ್ಥಳವಾದ ಕಾಶಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿದರೆ ನಮ್ಮ ಪಾಪಗಳೆಲ್ಲಾ ಪರಿಹಾರವಾಗಿ ದೇವರು ಮೋಕ್ಷ ನೀಡುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಎಲ್ಲಾ ಹಿಂದೂಗಳು ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್. ಜಗದೀಶ್, ಸೊಕ್ಕೆ ನಾಗರಾಜ್,
ಶಾಂತರಾಜ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಪಾಟೀಲ್, ಮಂಜಾನಾಯ್ಕ್, ಶ್ರೀನಿವಾಸ್ ದಾಸಕರಿಯಪ್ಪ, ಪಾಲಿಕೆ ಸದಸ್ಯರಾದ ಗೀತಾ ದಿಳ್ಯಪ್ಪ, ಸೋಗಿ ಶಾಂತಕುಮಾರ್, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,
ಜಿಲ್ಲಾ ಮಾಧ್ಯಮ ಪ್ರಮುಖ ಹೆಚ್.ಪಿ. ವಿಶ್ವಾಸ್, ಆಶ್ರಯ ಸಮಿತಿ ಮಾಜಿ ಸದಸ್ಯ ಆನಂದ ಹಿರೇಮಠ, ಮುಖಂಡರಾದ ಗೋಪಾಲ್ ರಾವ್ ಮಾನೆ, ಸಂಗನಗೌಡ್ರು, ಆನಂದರಾವ್ ಶಿಂಧೆ, ಮಹೇಶ್, ದೇವೇಂದ್ರಪ್ಪ ಶ್ಯಾಗಲೆ, ಎನ್. ರಾಜಶೇಖರ್, ಪಿ.ಸಿ. ಶ್ರೀನಿವಾಸ್, ರಾಜು ಶಾಮನೂರು, ಹೇಮಂತ್ ಕುಮಾರ್, ಶ್ರೀನಿವಾಸ್, ಗುರು ಸೋಗಿ, ಶಿವನಗೌಡ ಪಾಟೀಲ್, ಸರ್ವಮಂಗಳಮ್ಮ, ಮಂಜುಳ ಮಹೇಶ್, ಭಾಗ್ಯ ಪಿಸಾಳೆ, ಸವಿತಾನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.