ಹರಪನಹಳ್ಳಿ, ಸೆ.19- ಸ್ಥಳೀಯ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸ್ಥಾಪನೆ ಮಾಡಿದ್ದ ಹಿಂದೂ ಮಹಾಸಭಾ ಗಣೇಶ ಮೂರ್ತಿಯನ್ನು ಶನಿವಾರ ಸಂಜೆ ಪೊಲೀಸ್ ಬಂದೋಬಸ್ತ್ ಮಧ್ಯೆ ವಿಸರ್ಜಿಸಲಾಯಿತು.
ಹೊಸಪೇಟೆ ರಸ್ತೆ ಮೂಲಕ ನಾಯಕನಕೆರೆಗೆ ತೆಗೆದುಕೊಂಡು ಹೋಗಿ ಪುರಸಭೆಯವರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.
ಹಿರೇಹಡಗಲಿ ಅಭಿನವ ಹಾಲಸ್ವಾಮಿಗಳ ಸಮ್ಮುಖದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಉಪಸ್ಥಿತಿಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಇಲ್ಲದಿದ್ದರೂ ಡ್ರಮ್ ಸೆಟ್ ಭಾರಿಸುವುದರ ಮೂಲಕ ಕಾರ್ಯಕರ್ತರು ತೃಪ್ತಿಪಟ್ಟರು. ಪಟ್ಟಣದಲ್ಲಿ ಹರಿಹರ
ವೃತ್ತದಿಂದ ಹೊಸಪೇಟೆ ರಸ್ತೆ ಉದ್ದಕ್ಕೂ ಪ್ರವಾಸಿ ಮಂದಿರ ವೃತ್ತದವರೆಗೂ ಕೇಸರಿ ಬಣ್ಣದ ಹಾಳೆಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.
ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ ರಾವ್ ಮಾರ್ಗ ದರ್ಶನದಲ್ಲಿ ಸಿಪಿಐ ನಾಗರಾಜ ಕಮ್ಮಾರ ನೇತೃತ್ವದಲ್ಲಿ ಪಿಎಸ್ಐ ಗಳಾದ ಸಿ.ಪ್ರಕಾಶ್, ಕಿರಣ್ಕುಮಾರ, ಪ್ರಶಾಂತ್ ಅವರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ವಿಎಚ್ಪಿ ಅಧ್ಯಕ್ಷ ಎಚ್.ಎಂ. ಜಗದೀಶ, ಅಶೋಕ ಜಿ. ರಾವಲ, ಅಶೋಕ ಹಿಂದೂಸ್ಥಾನಿ, ಭರತ್ ಬೂದಿ, ನಿಟ್ಟೂರು ಸುರೇಶ, ಡಾ.ರಮೇಶಕುಮಾರ್, ಚಿಕ್ಕೇರಿ ಬಸಪ್ಪ, ಚಂದ್ರಶೇಖರ್ ಪೂಜಾರ, ಕಡೇಮನಿ ಸಂಗಮೇಶ, ದ್ಯಾಮಜ್ಜಿ ಹನುಮಂತ, ಅಜ್ಜಯ್ಯ, ನರಸಿಂಹ ಆಲೂರು, ಛತ್ರಪತಿ ಹಾಲೇಶ, ಮಂಜುನಾಥ ಕೂಲಹಳ್ಳಿ, ವೀರೂ ಹಿಂದೂಸ್ತಾನಿ, ಕುಲದೀಪ ರಾಹುಲ ಇನ್ನಿತರರು ಪಾಲ್ಗೊಂಡಿದ್ದರು.