ಅಧರ್ಮದ ವಿರುದ್ಧ ಹೋರಾಡಿದ ಪುಣ್ಯ ಪುರುಷ ಕೃಷ್ಣ ಪರಮಾತ್ಮ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಎಂ.ಪಿ. ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಸೆ.7- ಶ್ರೀಕೃಷ್ಣ ಸುಂದರ ಸಮಾಜದ ಪುನರುತ್ಥಾನಕ್ಕಾಗಿ ಶ್ರಮಿಸಿದ ಪುಣ್ಯ ಪುರುಷ. ಆತನ ಸುಂದರ, ಸೃಜನಶೀಲ ವಿಚಾರಗಳು ನಮ್ಮ ಬದುಕಿಗೆ ಆದರ್ಶ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ಬೆಂಡಿಗೆರೆ ಸಣ್ಣ ತಾಂಡಾದ ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿ ಮಾತನಾಡಿ, ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಅಸತ್ಯ ಹೆಚ್ಚಾದಾಗ ನಾನು ಮತ್ತೆ ಮತ್ತೆ ಅವತರಿಸುತ್ತೇನೆ. ಸಂಭವಾಮಿ ಯುಗೇ ಯುಗೇ ಎಂದ ಶ್ರೀ ಕೃಷ್ಣ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ, ಅಸತ್ಯದ ವಿರುದ್ಧ ಸತ್ಯಕ್ಕಾಗಿ, ಅಧರ್ಮದ ವಿರುದ್ಧ ಧರ್ಮಕ್ಕಾಗಿ ಶ್ರಮಿಸಿದ ಪುಣ್ಯ ಪುರುಷ ಎಂದರು. 

ವಿಶೇಷವಾಗಿ ನಮ್ಮ ಲಂಬಾಣಿ ಮತ್ತು ಗೊಲ್ಲ ಸಮುದಾಯದವರ ಆರಾಧ್ಯ ದೈವ ಶ್ರೀ ಕೃಷ್ಣನಾಗಿದ್ದು, ನಾನೂ ಕೂಡಾ ಶ್ರೀ ಕೃಷ್ಣನನ್ನು ಆರಾಧಿಸುತ್ತೇನೆ ಎಂದರು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್‌, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪೂರ್ಯಾನಾಯ್ಕ್, ಮಾಜಿ ಸದಸ್ಯ ಗುರುಸಿದ್ದಪ್ಪ, ಯಡಿಹಳ್ಳಿ, ಗ್ರಾಮ ಪಂಚಾಯ್ತಿ ಸದಸ್ಯ ಐ. ಮಲ್ಲಿಕಾರ್ಜುನ್‌, ಕೃಷ್ಣನಾಯ್ಕ್, ಮಹಾಂತೇಶ ನಾಯ್ಕ್, ಈಶ್ವರ್, ರವಿ ಇನ್ನಿತರರಿದ್ದರು.

error: Content is protected !!