ಮಲೇಬೆನ್ನೂರು, ನ.30- ಇಲ್ಲಿನ ಪೊಲೀಸರು ಮಂಗಳವಾರ ಪಟ್ಟಣದಲ್ಲಿ ಸಂಚರಿಸುವ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಬಗ್ಗೆ ಗುಲಾಬಿ ಹೂ ನೀಡಿ ಅರಿವು ಮೂಡಿಸಿದರು. ಪಿಎಸ್ಐ ರವಿಕುಮಾರ್ ಅವರು ಬೈಕ್ ಸವಾರರಿಗೆ ಹೆಲ್ಮೆಟ್ ಬಳಸುವುದರಿಂದ ರಸ್ತೆ ಅಪಘಾತ ನಡೆದರೂ ಜೀವ ಉಳಿಸಿಕೊಳ್ಳುವ ಬಗ್ಗೆ ತಿಳಿಸಿ, ನಾಳೆಯಿಂದ ಬೈಕ್ನಲ್ಲಿ ಎಲ್ಲಿಗೆ ಹೋದರು ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಪ್ರಾಣ ರಕ್ಷಣೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಉದ್ಯಮಿ ಸೈಯದ್ ರೋಷನ್, ಪೊಲೀಸರ ಈ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಆಟೋ ಮತ್ತು ಟ್ರ್ಯಾಕ್ಟರ್ ಚಾಲಕರಿಗೆ ಉಚಿತವಾಗಿ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಡುವುದಾಗಿ ಹೇಳಿದರು. ಪ್ರೊಬೇಷನರಿ ಪಿಎಸ್ಐ ಪಾಂಡುರಂಗ ಇತರರಿದ್ದರು.
January 1, 2025