ಅಪಘಾತದ ಪರಿಹಾರ ನೀಡದ ಮೂರು ಸಾರಿಗೆ ಬಸ್‌ಗಳ ಜಪ್ತಿ

ದಾವಣಗೆರೆ, ನ.29- ರಸ್ತೆ ಅಪಘಾತದಲ್ಲಿ ಮೃತ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಘಟಕದ ಮೂರು ಸಾರಿಗೆ ಬಸ್‌ಗಳನ್ನು ನ್ಯಾಯಾಲಯದ ಆದೇಶದಂತೆ ಅಮೀನರ ನೇತೃತ್ವದಲ್ಲಿ ಹರಿಹರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಜಪ್ತಿ ಮಾಡಿ ಹರಿಹರದ ನ್ಯಾಯಾಲಯಕ್ಕೆ ಅಮೀನರು ಹಾಜರು ಪಡಿಸಿದ್ದಾರೆ. 

ಘಟನೆ ವಿವರ : 2017ರ ಸೆಪ್ಟೆಂಬರ್ 13ರಲ್ಲಿ ಹರಿಹರದ ರಾಜನಹಳ್ಳಿ ಕ್ರಾಸ್‍ ಬಳಿ ಹುಬ್ಬಳ್ಳಿ ಘಟಕದ ಬಸ್ಸು ಅಪಘಾತ ಆಗಿತ್ತು. ಅದರಲ್ಲಿ ಚಂದ್ರಪ್ಪ ಎಂಬುವ ವೃದ್ಧರ ಇಬ್ಬರು ಮಕ್ಕಳಾದ ಬಸವರಾಜ್ ಹಾಗೂ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅದರಲ್ಲಿ ಒಬ್ಬರು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಇನ್ನೊಬ್ಬರು ವ್ಯವಸಾಯ ಮಾಡಿಕೊಂಡಿದ್ದರು. ಆದರೆ, ಪರಿಹಾರಕ್ಕಾಗಿ ಹರಿಹರದ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಹರಿಹರ ನ್ಯಾಯಾಲಯವು ಚಂದ್ರಪ್ಪ ಕುಟುಂಬಕ್ಕೆ 24 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿ, ತೀರ್ಪು ನೀಡಿತ್ತು. ಆದರೆ, ಈವರೆಗೆ ಯಾವುದೇ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ನನ್ನ ಇಬ್ಬರೂ ಮಕ್ಕಳು ಮೃತ ಹೊಂದಿದ್ದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ ಎಂದು ವೃದ್ಧ 72 ವರ್ಷದ ಚಂದ್ರಪ್ಪ ನ್ಯಾಯಾಲಯದ ಗಮನ ಸೆಳೆದಿದ್ದರು. 

ಈ ಕುರಿತು ನ್ಯಾಯಾಲಯವು ಮೃತರ ಕುಟುಂಬಕ್ಕೆ ಪರಿಹಾರ ನೀಡದ ಹುಬ್ಬಳ್ಳಿ ಘಟಕದ ಮೂರು ಬಸ್ಸುಗಳನ್ನು ಜಪ್ತಿ ಮಾಡುವಂತೆ ಸೂಚನೆ ನೀಡಿದೆ. ಅದರಂತೆ ಸೋಮವಾರ ಹರಿಹರ ನ್ಯಾಯಾಲಯದ ಅಮೀನರಾದ ಶ್ರೀನಿವಾಸಮೂರ್ತಿ, ಮನೋಹರ, ಬಸಪ್ಪಾಜಿ, ಓಂಕಾರಪ್ಪ, ಮಾಂತೇಶ್ ಬಸ್ಸುಗಳನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

error: Content is protected !!