19.24 ಲಕ್ಷ ರೂ.ಗಳ ಲಾಭದಲ್ಲಿ ಸಂಚಿತ ಕ್ರೆಡಿಟ್ ಸೊಸೈಟಿ

ದಾವಣಗೆರೆ,ನ. 29- ನಗರದ ಸಂಚಿತ ಕ್ರೆಡಿಟ್ ಕೋ-ಆಪರೇಟಿವ್ ಸೆೋಸೈಟಿಯ 2020 -21ನೇ ಸಾಲಿನ 21ನೇ ವಾರ್ಷಿಕ ಮಹಾಸಭೆಯು ಸೆೋಸೈಟಿ ಆವರಣದಲ್ಲಿ ನಿನ್ನೆ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೆೋಸೈಟಿ ಅಧ್ಯಕ್ಷ ಟಿ.ಎಂ. ಪಾಲಾಕ್ಷ  ಮಾತನಾಡಿ, ಗ್ರಾಹಕರಿಗೆ ಅನುಕೂಲವಾಗಲು ಎಲ್ಲಾ ರೀತಿಯ ಖಾತೆಗಳಿಗೂ ಯಾವುದೇ ಶುಲ್ಕವನ್ನು ವಿಧಿಸದೇ ಎಸ್.ಎಂ.ಎಸ್. ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದೆ. ಸೆೋಸೈಟಿಯ ಸದಸ್ಯರ ಮರಣೋತ್ತರ ನಿಧಿಯನ್ನು 5 ಸಾವಿರದಿಂದ 10 ಸಾವಿರಕ್ಕೆ  ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.

45 ಲಕ್ಷ ಷೇರು ಸಂಗ್ರಹಣೆ, 13 ಕೋಟಿ ಠೇವಣಿಗಳ ಸಂಗ್ರಹಣೆ, 12 ಕೋಟಿ  ಸಾಲ ಮತ್ತು ಮುಂಗಡಗಳು ಮತ್ತು 15 ಕೋಟಿ ರೂ.ಗಳಷ್ಟು  ದುಡಿಯುವ ಬಂಡವಾಳ ತೆೋಡಗಿಸುವ ಗುರಿ ಹೆೋಂದಲಾಗಿದೆ ಎಂದು ತಿಳಿಸಿದರು.

2020-21ನೇ ಸಾಲಿನಲ್ಲಿ 19.24 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ ಅವರು, ಉತ್ತಮ ಸೇವಾ ಯೋಜನೆಗಳನ್ನು ಜಾರಿಗೆೋಳಿಸಿ, ಗ್ರಾಹಕರಿಗೆ ಅನುಕೂಲ  ಮಾಡಲಾಗುವುದು  ಎಂದು ಹೇಳಿದರು.

ವಾರ್ಷಿಕ ಮಹಾಸಭೆಯ ನಡವಳಿಕೆಯನ್ನು ಕಾರ್ಯದರ್ಶಿ ಜೆ. ವಿಜಯಕುಮಾರ್ ಓದಿದರು. ಅಢಾವೆ ಪತ್ರಿಕೆ ಮತ್ತು ಲಾಭ ನಷ್ಟಗಳ ಲೆಕ್ಕ ಪರಿಶೋಧನಾ ವರದಿಯನ್ನು ನಿರ್ದೇಶಕ ಜೆ.ಸಂಜಯ್‌ಕುಮಾರ್ ಓದಿ ಅನುಮೋದನೆ ಪಡೆದರು. ಲಾಭ ಹಂಚಿಕೆಯ ವಿವರವನ್ನು  ನಿರ್ದೇ ಶಕ ವಿ.ಹೆಚ್.ಕುಮಾರ್ ನೀಡಿದರು. ಉಪಾಧ್ಯಕ್ಷ ಪಿ.ಎಂ.ವೀರಭದ್ರಯ್ಯ ಹೆಚ್ಚುವರಿ ವೆಚ್ಚದ ಬಾಬ್ತುಗಳಿಗೆ ಮಹಾಸಭೆ ಒಪ್ಪಿಗೆ ಕೋರಿದರು.

ಪಿ. ಹೇಮಲತಾ ಮತ್ತು ಶೋಭಾ ಪ್ರಾರ್ಥಿಸಿದರು. ನಿರ್ದೇಶಕ ಎಸ್.ವಿ. ರುದ್ರಮುನಿ ಸ್ವಾಗತಿಸಿದರು. ನಿರ್ದೇಶಕಿ ಎಂ.ಎಂ. ರಾಜಶ್ರೀ ವಂದಿಸಿದರು. 

ನಿರ್ದೇಶಕರಾದ ಜಿ.ವೈ.ಭೋಜರಾಜ್ ಮತ್ತು ಎನ್. ಹೆಚ್. ಪ್ರಕಾಶಚಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!