ಆಂಜನೇಯ ಸ್ವಾಮಿ ದೇವಸ್ಥಾನದ ಕಳಸಾರೋಹಣ

ದಾವಣಗೆರೆ, ನ.29- ನಗರದ ಎಸ್.ಎಸ್. ಬಡಾವಣೆಯ ಶ್ರೀ ಮುದ್ನಾಳ್ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭವು ಇಂದು ನೆರವೇರಿತು. ಬೆಳಗಿನಜಾವ ಹೋಮ-ಹವನಗಳು ನಡೆದವು. ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ ದೇವಸ್ಥಾನದ ಕಳಸಾರೋಹಣವನ್ನು ನೆರವೇರಿಸಿದರು.

ದೂಡಾ ಮಾಜಿ ಅಧ್ಯಕ್ಷ ಶಾಮನೂರು ಜಿ.ಹೆಚ್. ರಾಮಚಂದ್ರಪ್ಪ, ಜಿ.ಎಂ. ಹನುಮಂತಪ್ಪ,
ಜಿ. ಪರಮೇಶ್ವರಪ್ಪ, ಎನ್. ಓಂಕಾರಪ್ಪ, ಎ.ವಿ. ದೇವರಾಜ್, ಎನ್. ಸುರೇಶ್, ಬಿ.ಎಲ್. ಬಸವನಗೌಡ, ಹೆಚ್. ಅಜ್ಜಪ್ಪ, ವಿ.ಬಿ. ರುದ್ರೇಶ್, ಕೆ.ಪಿ. ರವಿ (ಧಣಿ), ಜಿ.ಎಂ. ವಿಜಯ, ಅಜ್ಜಯ್ಯಸ್ವಾಮಿ, ಷಣ್ಮುಖಪ್ಪ ಮತ್ತು  ಶಾಮನೂರಿನ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು,   ಬಡಾವಣೆ ನಾಗರಿಕರು ಮತ್ತು ಶಾಮನೂರು ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

error: Content is protected !!