ಬಿಜೆಪಿ ಅಭಿವೃದ್ಧಿ ಕೆಲಸ ಮಾಡಿಲ್ಲ

ಕಾಂಗ್ರೆಸ್‌ ಚುನಾವಣಾ ಪ್ರಚಾರದಲ್ಲಿ ಶಾಸಕ ರಾಮಪ್ಪ ತರಾಟೆ

ಹರಿಹರ, ನ.29 – ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನ ಪರವಾಗಿದ ಅಭಿವೃದ್ಧಿ ಕೆಲಸ ಮಾಡಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಜಿಎಸ್‌ಟಿ ಜಾರಿಗೆ ತಂದು ಅನೇಕ ಕಾರ್ಖಾನೆಗಳು ಮುಚ್ಚುವಂತೆ ಮಾಡಿದೆ. ಮತವನ್ನು ಹಾಕಿರುವ ಜನರ ಪ್ರೀತಿ, ವಿಶ್ವಾಸ ಗಳಿಸದೇ ಬರೀ ಹಣ ಗಳಿಸಿದೆ ಎಂದು  ಶಾಸಕ ಎಸ್. ರಾಮಪ್ಪ ಟೀಕಿಸಿದ್ದಾರೆ.

ನಗರದ ವಿದ್ಯಾನಗರದ ಐರಣಿ ಶಾಖಾಮಠದ ಸಭಾಂಗಣದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯ ಅಧ್ಯಕ್ಷತೆ  ವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಆಗಿದ್ದ ಅಭಿವೃದ್ಧಿ ಕೆಲಸ ಬಿಟ್ಟರೆ ಇದುವರೆಗೂ ಒಂದು ರೂಪಾಯಿ ಅಭಿವೃದ್ಧಿ ಕೆಲಸವನ್ನು ಮಾಡುವುದಕ್ಕೆ ಹಣ ಬಿಡುಗಡೆ ಮಾಡಿರುವುದಿಲ್ಲ ಎಂದವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಗ್ರಾಮ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಿ, ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಪರಿಷತ್ ಅಭ್ಯರ್ಥಿ ಸೋಮಶೇಖರ ಬಿ. ಮೋಟಗನಹಳ್ಳಿ ಮಾತನಾಡಿ, ನಾನು ಗೆದ್ದ ನಂತರದಲ್ಲಿ ಜನರ ಕಷ್ಟಗಳನ್ನು ಅರಿತು ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಭಿದಾಲಿ, ವಕೀಲ ಎಂ. ನಾಗೇಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಕುಂಬಳೂರು ವಿರುಪಾಕ್ಷಪ್ಪ, ಗ್ರಾಪಂ ಸದಸ್ಯ ದುಂಡ್ಯಪ್ಪ, ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಟೀಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎನ್. ಹೆಚ್. ಶ್ರೀನಿವಾಸ್, ಕೆ. ಜಡಿಯಪ್ಪ, ಮಹಮ್ಮದ್ ಫೈರೋಜ್, ಅಭಿದಾಲಿ, ತಾ.ಪಂ ಮಾಜಿ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಕೆ.ಪಿ.ಗಂಗಾಧರ್ ಮಲೇಬೆನ್ನೂರು, ತಾ.ಪಂ ಮಾಜಿ ಅಧ್ಯಕ್ಷ ಆಪ್ಪರ ವೀರಭದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ, ಹಿಂಡಸಘಟ್ಟ ಪರಮೇಶ್ವರಪ್ಪ, ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ನಗರಸಭೆ ಸದಸ್ಯ ವಸಂತ್, ದಾದಾಪೀರ್ ಭಾನುವಳ್ಳಿ, ಜಗಳೂರು ದೇವೇಂದ್ರಪ್ಪ, ಕುಮಾರ್ ಚಿತ್ರದುರ್ಗ, ಜಗಳೂರು ಭೈರೇಶ್, ಕುಂಬಳೂರು ವಿರುಪಾಕ್ಷಪ್ಪ, ತಾ.ಪಂ ಮಾಜಿ ಸದಸ್ಯ ಬಸಲಿಂಗಪ್ಪ, ಜಿಗಳಿ ಆನಂದಪ್ಪ, ನಾಗರಾಜ್ ಭಂಡಾರಿ, ಭಾಗ್ಯದೇವಿ, ನೇತ್ರಾವತಿ ಪ್ಯಾಟಿ ಇತರರು ಉಪಸ್ಥಿತರಿದ್ದರು.

error: Content is protected !!