ಮಲೇಬೆನ್ನೂರಿನಲ್ಲಿ ಸೂರ್ಯ ಗಾಯತ್ರಿಯ ಸಂಗೀತ ಉತ್ಸವ

ಮಲೇಬೆನ್ನೂರು, ನ.28- ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಂಗೀತ ಉತ್ಸವದಲ್ಲಿ ಕು. ಸೂರ್ಯಗಾಯತ್ರಿ ಅವರ ಹಾಡುಗಳು ಎಲ್ಲರ ಮನ ಸೆಳೆದವು.

ಕೇರಳದ ಪ್ರಖ್ಯಾತ ಯುವ ಗಾಯಕಿ ಕು. ಸೂರ್ಯಗಾಯತ್ರಿ ಅವರ ಹಾಡುಗಳನ್ನು ಕೇಳಲು ಅಪಾರ ಜನ ಚಳಿಯನ್ನೂ ಲೆಕ್ಕಿಸದೆ ಆಗಮಿಸಿದ್ದರು.

ಭಾಗ್ಯದ ಲಕ್ಷ್ಮೀ ಬಾರಮ್ಮ, ಸೋಜಿಗಾದ ಸೂಜಿ ಮಲ್ಲಿಗೆ, ಅಂಬಿಗಾ ನಾ ನಿನ್ನ ನಂಬಿದೆ ಸೇರಿದಂತೆ 12 ಕ್ಕೂ ಹೆಚ್ಚು ಹಾಡುಗಳನ್ನು ಹೇಳಿ ಸಭಿಕರನ್ನು ಮನರಂಜಿಸಿದ ಸೂರ್ಯಗಾಯತ್ರಿ ಅವರನ್ನು ಸಂಗೀತ ಉತ್ಸವದ ನಂತರ ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

ಶ್ರೀ ಸದ್ಗುರು ಗದ್ದಿಗೆಪ್ಪಜ್ಜಯ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿದ ಸಂಗೀತ ಉತ್ಸವದಲ್ಲಿ ಹೊಸರಿತ್ತಿಯ ಶ್ರೀ ಗುದ್ದಲಿ ಶಿವಯೋಗೀಶ್ವರ ಸ್ವಾಮೀಜಿ, ಸೂಡಿಜುಕ್ತಿ ಮಠದ ಡಾ. ಕೊಟ್ಟೂರು ಬಸವೇಶ್ವರ ಸ್ವಾಮೀಜಿ, ಮಾಜಿ ಶಾಸಕ ಹೆಚ್‌.ಎಸ್‌. ಶಿವಶಂಕರ್‌, ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಬಿ. ಪಂಚಪ್ಪ, ಉಪಾಧ್ಯಕ್ಷ ಬಿ. ಚಿದಾನಂದಪ್ಪ, ಎನ್‌.ಕೆ. ವೃಷಭೇಂದ್ರಪ್ಪ, ಬಿ. ನಾಗೇಂದ್ರಪ್ಪ, ಬಿ. ಮಹಾರುದ್ರಪ್ಪ, ಬಿ. ಮಲ್ಲಿಕಾರ್ಜುನ್‌, ಬಿ. ಉಮಾಶಂಕರ್‌, ಬಿ. ನಾಗೇಶ್‌, ಬಿ.ವಿ. ರುದ್ರೇಶ್‌, ಬಿ.ಸಿ. ಸತೀಶ್‌ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!