ಉದ್ಯಮಿ ನಂದಿಗಾವಿ ಶ್ರೀನಿವಾಸ್ ಸೇವೆ ಮಾದರಿ

ಮಲೇಬೆನ್ನೂರು, ಆ.26- ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ನಂದಿಗಾವಿ ಶ್ರೀನಿವಾಸ್ ಅವರು ಸಲ್ಲಿಸಿದ ಸೇವೆ ಮಾದರಿಯಾಗಿದೆ ಎಂದು ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿರಂಗನಾಥ ಸಮುದಾಯ ಭವನದಲ್ಲಿ ಆಟೋ ಚಾಲಕರ ಸಂಘದಿಂದ   ಉದ್ಯಮಿ ನಂದಿಗಾವಿ ಶ್ರೀನಿವಾಸ್ ಅವರಿಗೆ ಅವರಿಗೆ ಇಂದು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೇ ಉಧ್ದೇಶ ಇಟ್ಟುಕೊಳ್ಳದೆ ನಿರಂತರ ಸಮಾಜ  ಸೇವೆ ಮಾಡುತ್ತಿರುವ ನಂದಿಗಾವಿ ಶ್ರೀನಿವಾಸ್ ಅವರಿಗೆ ಭಗವಂತ ಇನ್ನಷ್ಟು ಉತ್ತಮ ಕೆಲಸ ಮಾಡಲು ಶಕ್ತಿ ನೀಡಲೆಂದು ಮಂಜುನಾಥ್ ಶುಭ ಹಾರೈಸಿದರು.

ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವ ರಪ್ಪ ಮಾತನಾಡಿ, ಸ್ಯಾನಿಟೈಜ್ ಮಾಡುವ ಮೂಲಕ ಹಳ್ಳಿಗಳಲ್ಲಿ ಮಲೇರಿಯಾ, ಡೆಂಗ್ಯೂ ಸೇರಿದಂತೆ, ಇತರೆ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಶ್ರೀನಿವಾಸ್ ಮಾಡಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ ಮಾತನಾಡಿ, ಶ್ರೀನಿವಾಸ್ ಅವರು ನಮ್ಮ ಪಕ್ಷಕ್ಕೆ ಸೇರಿರುವುದು ನಮಗೆ ಶಕ್ತಿ ತಂದಿದೆ ಎಂದರು. ಬ್ಲಾಕ್‌ ಕಾಂಗ್ರೆಸ್ ಒಬಿಸಿ ಅಧ್ಯಕ್ಷ ಕೆ.ಪಿ. ಗಂಗಾಧರ್, ಹಾಲಿವಾಣ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್. ಎಂ. ಮಂಜುನಾಥ್, ಮಾಜಿ ಉಪಾಧ್ಯಕ್ಷ ಪರಮೇಶ್ವರ ನಾಯ್ಕ ಮತ್ತಿತರರು ಮಾತನಾಡಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದಿಗಾವಿ ಶ್ರೀನಿವಾಸ್ ಅವರು, ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಬಳಸುತ್ತಿದ್ದೇನೆ. ಕೋವಿಡ್‌ ವೇಳೆ  ಜನರಿಗೆ ಫುಡ್‌ಕಿಟ್‌ ಹಾಗೂ ಕೊರೊನಾ ವಾರಿಯರ್‌ಗಳಿಗೆ ಹೆಲ್ತ್‌ಕಿಟ್‌, ಆಯುಷ್‌ ಕಿಟ್‌, ಹಬೆ ಯಂತ್ರ ಸೇರಿದಂತೆ, ಅಗತ್ಯ ವಸ್ತುಗಳನ್ನು ನೀಡಿರುವುದು ನನಗೆ ಹೆಚ್ಚು ಖುಷಿ ಕೊಟ್ಟಿದೆ ಎಂದು ಹೇಳಿದರು.

ಮಲೇಬೆನ್ನೂರು ಪುರಸಭೆ ಮಾಜಿ ಸದಸ್ಯ ಆರೀಫ್ ಅಲಿ, ಪಿಡಬ್ಲ್ಯೂಡಿ ಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್‌ ಹಾಲಿವಾಣ, ಗ್ರಾ.ಪಂ. ಸದಸ್ಯರಾದ ಎಂ.ಆರ್. ಬಸವರಾಜ್‌, ಚಿಕ್ಕಣ್ಣ, ಹಾಲೇಶ್, ವೀರಣ್ಣ, ಜಿಗಳಿ ಗ್ರಾ.ಪಂ. ಸದಸ್ಯ ಕೆ.ಜಿ. ಬಸವರಾಜ್, ಆಟೋ ಚಾಲಕರ ಸಂಘದ ಬೇವಿನಹಳ್ಳಿಯ ಹೆಚ್. ಬಸವರಾಜ್, ಹರಳಹಳ್ಳಿ ಚಂದ್ರಪ್ಪ, ನಂದಿಗಾವಿ ಶ್ರೀನಿವಾಸ್ ಅಭಿಮಾನಿ ಬಳಗದ ಬಸವರಾಜ್ ದೊಡ್ಮನಿ, ಹರಳಹಳ್ಳಿ ಮಂಜು, ಹರಿಹರದ ಮಂಜು, ಮಾರುತಿ, ಕನಕ ಯುವ ಬ್ರಿಗೇಡ್‌ ಅಧ್ಯಕ್ಷ ಉದ್ದಣ್ಣರ ಅಣ್ಣೇಶ್‌ ಇನ್ನಿತರರು ಹಾಜರಿದ್ದರು.

error: Content is protected !!