ಹರಪನಹಳ್ಳಿ, ಆ.24- ಪಟ್ಟಣದ ಹೊರವಲಯದ ದೇವರ ತಿಮ್ಮಲಾಪುರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಂದ ಸಂಗ್ರಹವಾದ ಕಾಣಿಕೆಯ ಹುಂಡಿಯನ್ನು ಎಣಿಕೆ ಮಾಡಲಾಯಿತು.
ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ತಿಮ್ಮಲಾಪುರ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬುಧವಾರ ಹುಂಡಿಯನ್ನು ಎಣಿಕೆ ಮಾಡಿದಾಗ ಒಟ್ಟು 7,02,716 ರೂ. ಸಂಗ್ರಹವಾಗಿವೆ. ಈ ಮೊತ್ತವನ್ನು ಕೆನರಾ ಬ್ಯಾಂಕಿನ ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ ಎಂದು ಕಂದಾಯ ನಿರೀಕ್ಷಕ ಅರವಿಂದ್ ತಿಳಿಸಿದ್ದಾರೆ. ಈ ವೇಳೆ ಶಿರಸ್ತೇದಾರ್ ಜಿ.ಟಿ.ಚಂದ್ರಶೇಖರ್, ಮುಜರಾಯಿ ಇಲಾಖೆಯ ರಮೇಶ್, ಧರ್ಮ ದರ್ಶಿಗಳಾದ ಡಾ. ಹರ್ಷ ಕಟ್ಟಿ, ಹರೀಶ್ ದಂಡಿನ ಮತ್ತು ಇತರರು ಉಪಸ್ಥಿತರಿದ್ದರು.