ಹರಪನಹಳ್ಳಿ, ಆ.18- ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಕಾಂಗ್ರೆಸ್ ಘಟಕದಿಂದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಸಾರಥ್ಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿ ಮನೆ – ಮನೆಗೂ ‘ತವರಿನ ಉಡುಗೊರೆ’ ಹೆಸರಿನಲ್ಲಿ ‘ಅರಿಷಿಣ, ಕುಂಕುಮ, ಬಳೆ, ಉಂಡಿ’ ವಿತರಿಸುವ ಮೂಲಕ ‘ಶ್ರಾವಣ ಸಂಭ್ರಮ’ ಮನೆ ಮಾಡಿದೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ‘ತವರಿನ ಉಡುಗೊರೆ’ ನೀಡುವ ಮೂಲಕ ಲತಾ ಮಲ್ಲಿಕಾರ್ಜುನ್ ಅವರು ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿದರು. ಪಟ್ಟಣದ ಜನರಿಗೆ ಹೊಸ ಅನುಭವ ಕೊಟ್ಟ ಶ್ರಾವಣ ಸಂಭ್ರಮ ಎಲ್ಲರಲ್ಲಿ ಸಂಭ್ರಮ, ಸಡಗರ ತಂದಿದೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಾ ದಿವಾಕರ್, ತಾ.ಪಂ. ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ನಂದಿಬೇವೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಗೊಂಗಡಿ ಸಹನಾ ನಾಗರಾಜ್, ಕಡಬಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನುಷಾ ಮಂಜುನಾಥ್, ಮಹೇಶ್ವರಿ ಬಸವರಾಜಯ್ಯ, ಸುಮ ಜಗದೀಶ್, ನೇತ್ರಾವತಿ, ಉಮಾ ಶಂಕರ್, ಪುರಸಭೆ ಮಾಜಿ ಸದಸ್ಯೆ ಕವಿತಾ ಸುರೇಶ್, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಉದಯಶಂಕರ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್, ಮತ್ತೂರು ಲಿಂಗರಾಜ್ ಇನ್ನಿತರರಿದ್ದರು.