ಬಸ್‌ನಲ್ಲಿ ಭಜನೆ…. : ಈ ಮಾರ್ಗದಲ್ಲಿ ಸಂಚರಿಸಲು ಒಂದು ಬಸ್ ಅನ್ನು ಸೀಮಿತಗೊಳಿಸಿದಲ್ಲಿ ಅದರಲ್ಲಿ ಧ್ವನಿವರ್ಧಕ ಅಳವಡಿಸಿ, ಆರೂಢ ಪರಂಪರೆಯ ತತ್ವಾದರ್ಶಗಳ ಹಾಗೂ ಭಜನೆ ಪ್ರಸಾರ ಮಾಡುವ ಮತ್ತು ವಿಶಿಷ್ಟ ರೀತಿಯಲ್ಲಿ ಶೃಂಗರಿಸುವ ಕಾರ್ಯವನ್ನು ಮಠದಿಂದ ಮಾಡಲಾಗುವುದು. ಇದರಲ್ಲಿ ಸಂಚರಿಸುವವರಿಗೆ ಮನೋಲ್ಲಾಸ ಉಂಟಾ ಗುವುದು ಎಂದು ಬಾಬು ತಿಳಿಸಿದರು.
ರಾಣೇಬೆನ್ನೂರು, ಆ.17- ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಕೊರೊನಾ ಸಂಕಷ್ಟದಿಂದ ಸುಮಾರು 12 ಸಾವಿರ ಕೋಟಿಗೂ ಅಧಿಕ ನಷ್ಟದಲ್ಲಿದ್ದರೂ ಸಹ, ಸೇವೆಯನ್ನೇ ಗುರಿಯಾಗಿಸಿಕೊಂಡಿರುವ ಸಂಸ್ಥೆ ಸಾರ್ವಜನಿಕರ ಸೇವೆಯಿಂದ ಹಿಂದೆ ಸರೆಯುವುದಿಲ್ಲ ಎಂದು ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.
ಪ್ರತಿದಿನ ಐರಣಿ ಹೊಳೆಮಠದಿಂದ ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಸಂಚರಿಸುವ ಸಂಸ್ಥೆಯ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ತಮ್ಮ ಜೀವದ ಹಂಗು ತೊರೆದು ಎಲ್ಲ ಸಮಯದಲ್ಲೂ ಕರ್ತವ್ಯ ನಿರ್ವಹಿಸಿದ ನೌಕರರ ಸಂಬಳವನ್ನು ಸಾಲ ಮಾಡಿ ಕೊಡಲಾಗಿದೆ. ಎಲ್ಲೆಡೆ ನಮ್ಮ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸಿ, ಸಂಸ್ಥೆಯನ್ನು ಉಳಿಸಿ, ಬೆಳೆಸುವಂತೆ ಸಾರ್ವಜನಿ ಕರಿಗೆ ಕೇಲಗಾರ ಮಾಡಿದ ಮನವಿಯನ್ನು ಸಂಸ್ಥೆಯ ನಿರ್ದೇಶಕ ಸಂತೋಷ ಪಾಟೀಲ ಸಹ ಪುನರುಚ್ಚರಿಸಿದರು. ಭೂಮಿ ಮೇಲಿನ ಪ್ರತಿ ಯೊಂದು ಜೀವಿಯು ಒಂದಿಲ್ಲೊಂದು ರೀತಿ ಯಲ್ಲಿ ಪರೋ ಪಕಾರ ಮಾಡುವುದ ರೊಂದಿಗೆ ಬದುಕನ್ನು ಸಾರ್ಥಕ ಮಾಡಿಕೊಳ್ಳುವಂತೆ, ಅಧ್ಯಾತ್ಮದ ಬದುಕಿಗೆ ಅಂಟಿಕೊಂಡಿರುವ ಉಭಯ ಮಠಗಳ ಭಕ್ತರಿಗೆ ಸಹಾಯ ಕಲ್ಪಿಸುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ತನ್ನೆಲ್ಲಾ ಸಂಕಷ್ಟಗಳಿಂದ ಮುಕ್ತಿಗೊಳ್ಳಲಿ. ಎಲ್ಲ ಜನರು ಈ ಬಸ್‌ಗಳಲ್ಲಿ ಸಂಚರಿಸಿ ಸಹಕಾರಿಗಳಾಗಲಿ ಎಂದು ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹರಸಿದರು.
ಐರಣಿಗೆ ಬರುವ ಎಲ್ಲಾ ಬಸ್‌ಗಳನ್ನು ಮಠದವರೆಗೆ ಬಿಡುವಂತೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಮಠದ ಸಂಚಾಲಕ ಬಾಬು ಶೆಟ್ಟರ್ ಮನವಿ ಮಾಡಿ ಕಾರ್ಯಕ್ರಮ ನಿರೂಪಿಸಿದರು.