ದಾವಣಗೆರೆ, ಮಾ.29- ದಾವಣಗೆರೆ ವಿಶ್ವವಿದ್ಯಾನಿಲಯದ ರಾಂಕ್ ವಿಜೇತರಿಗೆ 2 ಬಂಗಾರದ ಪದಕಗಳನ್ನು ಈ ವರ್ಷದಿಂದ ಪ್ರತಿ ವರ್ಷ ಕೊಡುಗೆಯಾಗಿ ನೀಡುವುದಾಗಿ ಸಾಮಾಜಿಕ ಸೇವಾ ಕಾರ್ಯಕರ್ತ ಸಿ.ಆರ್. ನಸೀರ್ ಅಹ್ಮದ್ ತಿಳಿಸಿದ್ದಾರೆ.
ತನ್ನ ತಂದೆ-ತಾಯಿ ದಿ. ಶ್ರೀಮತಿ ಸಬೀರಾ ಮತ್ತು ಸಿ. ಅಬ್ದುಲ್ ರಹೀಂ ದಂಪತಿ ಹೆಸರಿನಲ್ಲಿ ಈ ಕೊಡುಗೆ ನೀಡುವುದಾಗಿ ಹೇಳಿರುವ ಅವರು, ದೇಣಿಗೆಯ ಚೆಕ್ಕನ್ನು ದಾವಣಗೆರೆ ವಿವಿ ಮೌಲ್ಯಮಾಪನ ಕುಲಸಚಿವ ರಾದ ಶ್ರೀಮತಿ ಅನಿತಾ ಅವರಿಗೆ ಸಲ್ಲಿಸಿದ್ದಾರೆ.