ಕೇಂದ್ರ, ರಾಜ್ಯ ಸರ್ಕಾರಗಳಿಗೆ ಜನಪರ ಕಾಳಜಿ ಇಲ್ಲ

ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ

ಹರಪನಹಳ್ಳಿ, ಮಾ.28. – ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ  ರೈತರ, ಕಾರ್ಮಿಕರ, ಜನಸಾಮಾನ್ಯರ ಬಗ್ಗೆ  ಜನಪರ ಕಾಳಜಿ ಇಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ  ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ  ಆರೋಪಿಸಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ  ಎ.ಐ.ಟಿ.ಯು.ಸಿ ಶತಮಾನೋತ್ಸವ ಹಾಗೂ ಫೆಡರೇಷನ್ ತಾಲ್ಲೂಕು 6ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಇಂಧನ ಬೆಲೆ ಶ್ರೀಲಂಕಾ ಮತ್ತು ನೇಪಾಳದಲ್ಲಿ ಕಡಿಮೆ ಇದ್ದು ಭಾರತದಲ್ಲಿ  ಮಾತ್ರ ಹೆಚ್ಚಾಗಿದೆ. ಇಂಧನ ಬೆಲೆ ಏರಿಕೆಯಿಂದ  ಜನಸಾಮಾನ್ಯರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ದೂರಿದರು. 

ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಎ.ಐ.ಕೆ.ಎಸ್ ರಾಜ್ಯ ಉಪಾಧ್ಯಕ್ಷ ಹೊಸಳ್ಳಿ ಮಲ್ಲೇಶ್, ಎ.ಐ.ಟಿ.ಯು.ಸಿ ಕಾರ್ಯ ದರ್ಶಿ ಜನಾರ್ದನ, ಜಿಲ್ಲಾ ಕಾರ್ಯದರ್ಶಿಎ.ಆರ್.ಎಂ. ಇಸ್ಮಾಯಿಲ್ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ನಿಗದಿ, ಅಂಗನವಾಡಿಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ ಆರಂಭಿಸುವುದು, ಪಠ್ಯ ಪುಸ್ತಕ ಸಮವಸ್ತ್ರ ಒದಗಿ ಸುವುದು. ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಎ.ಐ.ಟಿ.ಯು.ಸಿ  ತಾಲ್ಲೂಕು ಅಧ್ಯಕ್ಷೆ ಬಿ.ಎಂ. ತ್ರಿವೇಣಿ, ಎ.ಐ.ಟಿ.ಯು.ಸಿ  ತಾಲ್ಲೂಕು  ಕಾರ್ಯ ದರ್ಶಿ ಗುಡಿಹಳ್ಳಿ ಹಾಲೇಶ್‍, ಮುಖಂಡರಾದ ಕೆ.ಎಸ್ ಹಡಗಲಿ ಮಠ್, ಕಂಚಿಕೇರಿ ಪಿ.ಜಯಲಕ್ಷ್ಮಿ, ಎಂ.ಸುಮಾ, ರಮೇಶನಾಯ್ಕ, ಮಹಾಂತಮ್ಮ, ಮಂಗಮ್ಮ, ಫಾತಿಮಾ, ನಾಗರತ್ನಮ್ಮ ಇತರರಿದ್ದರು.

error: Content is protected !!