ಡಾ. ಗಾಯತ್ರಿ ದೇವರಾಜ್
ದಾವಣಗೆರೆ, ಮಾ. 26- ಪರಿಸರ ಸಂರಕ್ಷಣೆ ನಮೆಲ್ಲರ ಹೊಣೆ. ಜಗದ ಎಲ್ಲಾ ಜೀವಿಗಳಿಗೆ ಮೂಲ ಸಂಪನ್ಮೂಲ ಕೇಂದ್ರ ಅರಣ್ಯ. ಇಂದು ಆಧುನಿಕ ಪ್ರಪಂಚದ ಭರಾಟೆಯಲ್ಲಿ ಅರಣ್ಯ ನಾಶದಿಂದ ಹಸಿರು ಮನೆ ಪರಿಣಾಮ ಹೆಚ್ಚಿನ ಆಂತರಿಕ ಉಷ್ಣಾಂಶ, ದಿಕ್ಕು ತಪ್ಪಿದ ಮಾರುತಗಳನ್ನು ನೋಡುತ್ತಿದ್ದೇವೆ. ಆದುದ ರಿಂದ ಪ್ರತಿಯೊಬ್ಬರೂ ವರ್ಷಕ್ಕೊಂದು ಗಿಡ ನೆಟ್ಟು ಪೋಷಿಸಿ, ಬೆಳೆಸಬೇಕೆಂದು ದಾವಣಗೆರೆ ವಿವಿಯ ಕುಲಸಚಿವರಾದ ಡಾ. ಗಾಯತ್ರಿ ದೇವರಾಜ್ ತಿಳಿಸಿದರು.
ಅವರು ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಬಾಪೂಜಿ ಬಿ ಸ್ಕೂಲ್, ಎಂಬಿಎ ತರಬೇತಿ, ಬಿಐಇಟಿ ಕಾಲೇಜು ಇವರ ಸಂಯುಕ್ತಾ ಶ್ರಯದಲ್ಲಿ ಅಂತರರಾಷ್ಟ್ರೀಯ ಅರಣ್ಯ ದಿನದ ಅಂಗ ವಾಗಿ ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ನುಗ್ಗೆ ಸಸಿ ನಾಟಿ ಕಾರ್ಯಕ್ರಮ ಏರ್ಪಡಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ದೇವರಾಜ ಟಿ.ಎನ್. ಕೇಂದ್ರದ ಆವರಣದಲ್ಲಿ ಸ್ಥಾಪಿಸಲಾಗಿರುವ ಮಿಯಾವಾಕಿ ಮಿನಿ ಅರಣ್ಯದ ಕುರಿತು ಮಾಹಿತಿಯನ್ನು ನೀಡಿದರು.
ಬಾಪೂಜಿ ‘ಬಿ’ ಸ್ಕೂಲ್ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ, ಪ್ರಾಂಶುಪಾಲ ಡಾ. ನವೀನ್ ನಾಗರಾಜ್ ಮಾತನಾಡಿದರು.
ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ, ಪ್ರಾಧ್ಯಾಪಕ ಡಾ. ಸುಜಿತ್, ಡಾ. ಅಶೋಕ, ಡಾ. ಸರೋಜ, ಡಾ. ದಿವ್ಯ ಹಾಗೂ ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ಜೆ. ರಘುರಾಜ, ಮಣ್ಣು ವಿಜ್ಞಾನ ತಜ್ಞ ಹೆಚ್.ಎಂ. ಸಣ್ಣಗೌಡ್ರ ಮತ್ತಿತರರಿದ್ದರು.