ವೈಯಕ್ತಿಕವಾಗಿ ಹಣ ಪಡೆದಿಲ್ಲ

ಪಳನಿ ಸ್ವಾಮಿ ಸ್ಪಷ್ಟನೆ

ದಾವಣಗೆರೆ, ಮಾ. 26- ಆಶ್ರಯ ಮನೆ ಅಥವಾ ನಿವೇಶನ ಕೊಡಿಸುವ ಸಲುವಾಗಿ ನಾನು ವೈಯಕ್ತಿಕವಾಗಿ ಯಾರಿಂದಲೂ  ಹಣ ಪಡೆದಿಲ್ಲ ಎಂದು ಜಿಲ್ಲೆಯ 3 ಹಾಗೂ 4 ಚಕ್ರಗಳ ಗೂಡ್ಸ್ ವಾಹನಗಳ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಪಳನಿಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಪಳನಿಸ್ವಾಮಿ ಎಂಬುವವರು ಆಶ್ರಯ ಮನೆಗಳನ್ನು ಕೊಡಿಸುವುದಾಗಿ ಜನರ ಬಳಿ ಹಣಕಾಸು ವ್ಯವಹಾರ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಜನರು ಖಾಸಗಿ ವ್ಯಕ್ತಿಗಳನ್ನು ನಂಬಿ ಹಣ ನೀಡಿ ಮೋಸ ಹೋಗಬಾರದು  ಎಂಬ ಜಿಲ್ಲಾಧಿಕಾರಿಗಳ ಹೇಳಿಕೆ ಕುರಿತು ಅವರು ಸ್ಪಷ್ಟನೆ ನೀಡಿದರು.

ನಿವೇಶನ ಹಾಗೂ ವಸತಿ ರಹಿತ ಕುಟುಂಬಕ್ಕೆ ವಸತಿ ಸೌಲಭ್ಯ ಒದಗಿಸಲು ನೀಲಾನಹಳ್ಳಿ ಗ್ರಾಮದಲ್ಲಿ 19 ಎಕರೆ 13 ಗುಂಟೆ ಜಮೀನನ್ನು ಖರೀದಿಸಲು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಮೊತ್ತವನ್ನು ಮಾಲೀಕರು ಕೇಳಿದ್ದರು.

ಸರ್ಕಾರ ಹೆಚ್ಚು ಮೊತ್ತ ಕೊಡಲು ಒಪ್ಪದಿದ್ದರಿಂದ ಮೇಲಿನ ಹಣವನ್ನು ಅರ್ಜಿದಾರದಿಂದಲೇ ಕೊಡಿಸುವ ಉದ್ದೇಶದಿಂದ ಅರ್ಜಿದಾರರ ಹೆಸರಿನಲ್ಲಿಯೇ ಖಾತೆ ಮಾಡಿಸಿ, ಅವರ ಖಾತೆಯಲ್ಲಿ ಕನಿಷ್ಯ 60 ಸಾವಿರ ರೂ. ಇರುವಂತೆ ಹೇಳಲಾಗಿದೆಯೇ ಹೊರತು, ನಾನು ಯಾರಿಂದಲೂ ವೈಯಕ್ತಿಕವಾಗಿ ಹಣ ಪಡೆದಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಲು ಬರುವ ಮಂಗಳವಾರ ಸಾರ್ವಜನಿಕರೊಂದಿಗೆ ಡಿಸಿ ಕಚೇರಿಗೆ ತೆರಳುವುದಾಗಿಯೂ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಪಿ.ಎಸ್., ಎಸ್.ನಾಗರಾಜ್, ಮಾನಪ್ಪ ಉಪಸ್ಥಿತರಿದ್ದರು.

error: Content is protected !!