ಹರಿಹರ, ಆ.5 – ಯೋಗದಿಂದ ಉತ್ತಮ ಆರೋಗ್ಯ ಪಡೆದು ಬದುಕನ್ನು ಸುಂದರಗೊಳಿಸಿಕೊಳ್ಳಬ ಹುದಲ್ಲದೆ, ದೈನಂದಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಬಹುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರೂ ಹಾಗೂ ಪತ್ರಕರ್ತ ಟಿ. ಇನಾಯತ್ ಉಲ್ಲಾ ತಿಳಿಸಿದರು.
ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಸಪ್ತರಿಷಿ ಯೋಗ ಕೇಂದ್ರದಲ್ಲಿ ತಮಿಳುನಾಡಿನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ಯೋಗಪಟು ಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಸ್ಕೂಲ್ ಗೇಮ್ಸ್ ಡೆವಲಪ್‍ಮೆಂಟ್ ಫೌಂಡೇಶನ್ (ತಮಿಳುನಾಡು) ಇವರ ಆಶ್ರಯದಲ್ಲಿ ದಿ ವರ್ಲ್ಡ್ ಯೋಗ ದಿನಾಚರಣೆ ಅಂಗವಾಗಿ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಆನ್‍ಲೈನ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹರಿಹರದ ಸಪ್ತರಿಷಿ ಯೋಗ ಕೇಂದ್ರದ ಹತ್ತೊಂಬತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚಿಂತನ ಯೂಟ್ಯೂಬ್ ಚಾನಲ್ ಸಂಪಾದಕ ಸುಬ್ರಹ್ಮಣ್ಯ ನಾಡಿಗೇರ್ ಅವರು, ಯೋಗ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಜೊತೆಗೆ ಪದಕಗಳನ್ನು ವಿತರಿಸಿದರು.
ಸಪ್ತರಿಷಿ ಯೋಗ ಕೇಂದ್ರದ ಅಧ್ಯಾಪಕರೂ, ಸುಭಾ ಷಿತ ಪತ್ರಿಕೆ ಸಂಪಾದಕ ಡಾ.ಕೆ. ಜೈಮುನಿ ಸ್ವಾಗತಿಸಿ, ವಂದಿ ಸಿದರು. ಯೋಗ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.