5ನೇ ತರಗತಿವರೆಗೆ ಬೋಧಿಸುತ್ತೇವೆ: ಪ್ರಾಥಮಿಕ ಶಾಲಾ ಶಿಕ್ಷಕರ ಮನವಿ

ಹೊನ್ನಾಳಿ, ಜೂ.28- ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಕೆಎಟಿಗೆ  ಒಂದರಿಂದ ಐದನೇ ತರಗತಿಗೆ ಮಾತ್ರ ಬೋಧಿಸಲಾಗುವುದು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಆರರಿಂದ ಎಂಟನೇ ತರಗತಿವರೆಗೆ ಪಾಠ ಬೋಧನೆ ಮಾಡುವುದಿಲ್ಲ ಎಂದು ಸಂಘದ ಅಧ್ಯಕ್ಷ ಹೊನ್ನೇಶ್ ತಿಳಿಸಿದ್ದಾರೆ.

ಈ ವಿಷಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೀವ್‌ ಅವರಿಗೆ ಮನವಿ ನೀಡಿ ಮಾತನಾಡಿದರು. ಸಂಘದ ಶಿಕ್ಷಕರುಗಳು ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳಲ್ಲಿ ಈವರೆಗೂ ಒಂದರಿಂದ ಎಂಟನೇ ತರಗತಿವರೆಗೆ ಬೋಧಿಸಿಕೊಂಡು ಬರುತ್ತಿದ್ದರು. ಇದೀಗ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ (ಕೆಎಟಿ) ನಮ್ಮನ್ನು ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‍ಟಿ) ಎಂದು  ತಿಳಿಸಿದ ಕಾರಣ ಸಂಘ ಈ ರೀತಿ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.

ಈ ನಿರ್ಧಾರವನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ  ಗಮನಕ್ಕೆ  ತರಲಾಗಿದೆ ಎಂಬುದಾಗಿ ವಿವರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇದೀಗ ಮನವಿ ಸಲ್ಲಿಸಲಾಗಿದೆ ಎಂದರು.

ಮತ್ತೊಂದೆಡೆ ಪದವೀಧರ ಶಿಕ್ಷಕರುಗಳಿಗೆ ಮಾತ್ರ ಕೆಎಟಿ ಯಿಂದ ತಮಗಾದ ಅನ್ಯಾಯದ ವಿರುದ್ಧ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧೀಕರಣಕ್ಕೆ ಮನವಿ ಸಲ್ಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು  ಇಲಾಖೆಗೆ ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಹೇಶ್ವರಪ್ಪ, ಖಜಾಂಚಿ ತೋಟಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯ ಮಂಜುನಾಥ್, ಹಾಲಸ್ವಾಮಿ, ಪ್ರಭು, ಪ್ರಶಾಂತ್, ಸಾವಿತ್ರಿ ಬಾಪುಲೆ, ಮಹಿಳಾ ಶಿಕ್ಷಕರ ಸಂಘದ ಅಧ್ಯಕ್ಷೆ ಶಹಜಾನ್, ಕಾರ್ಯದರ್ಶಿ ರಂಜಿತಾ, ಉಪಾಧ್ಯಕ್ಷೆ ರೂಪಾ, ಪ್ರಾಥಮಿಕ ಶಾಲಾ  ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ರುದ್ರೇಶ್, ಖಜಾಂಚಿ ಚಂದ್ರಶೇಖರ್, ಗೌ. ಅಧ್ಯಕ್ಷ ದೊಂಕತ್ತಿ ನಾಗರಾಜ್, ಕೋಟ್ಯಪ್ಪ ಇದ್ದರು.

error: Content is protected !!