ವ್ಯಾಯಾಮದಿಂದ ದೇಹಸ್ಥಿತಿ ಸುಧಾರಣೆ

ಹರಿಹರ : ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಡಾ.ಚಂದ್ರಮೋಹನ್

ಹರಿಹರ, ಮಾ.24- ದಿನನಿತ್ಯ ಯೋಗ ಮತ್ತು ವ್ಯಾಯಾಮ ಮಾಡುವ ಮೂಲಕ ದೇಹಸ್ಥಿತಿ ಸುಧಾರಿಸುತ್ತದೆ. ಮನಸ್ಸು ಉತ್ತಮಗೊಳ್ಳುತ್ತದೆ. ನಿರಂತರ ಪಾಲನೆಯಿಂದ  ಕ್ಷಯ ಮುಕ್ತ ಸದೃಢ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಡಿ.ಎಂ. ಚಂದ್ರಮೋಹನ್ ತಿಳಿಸಿದರು.

ನಗರದ ಗುರುಭವನದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ನಡೆದ  ವಿಶ್ವ ಕ್ಷಯ ರೋಗ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಟಿ.ಬಿ. ಒಂದು ಸಾಂಕ್ರಾಮಿಕ ಕಾಯಿಲೆ ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಬ್ಯಾಸಿಲೆಗಳಿಂದ ಹರಡುತ್ತದೆ. ಟಿಬಿ ಒಬ್ಬರಿಂದ ಇನ್ನೊಬ್ಬರಿಗೆ ಕೆಮ್ಮುವುದರ ಮೂಲಕ ಗಾಳಿಯಿಂದ ಹರಡುತ್ತದೆ. ಸರಿಯಾದ ಔಷಧಿಯನ್ನು ಸರಿಯಾದ ಪ್ರಮಾಣದಲ್ಲಿ ಸೂಕ್ತ ಕಾಲಾವಧಿಯವರಿಗೆ ತೆಗೆದುಕೊಂಡಲ್ಲಿ ಟಿಬಿಯನ್ನು ಸಂಪೂ ರ್ಣವಾಗಿ ಗುಣಪಡಿಸಬಹುದಾಗಿದೆ.

 ಪದೇ ಪದೇ ಕೆಮ್ಮು ಇದ್ದಲ್ಲಿ ಮಾಸ್ಕ್ ಬಳಕೆ ಮಾಡುವುದು, ಆಗಾಗ ಸಾಬೂನು ಬಳಸಿ ಕೈ ತೊಳೆಯಬೇಕು, ತಂಬಾಕು ಸೇವನೆ  ಹಾಗೂ ಮದ್ಯಪಾನ ಹಾನಿಕಾ ರಕ. ಚಿಕಿತ್ಸೆ, ಔಷಧಿ ಪೂರ್ಣವಾದ ಬಳಿಕವೂ ಸಹ ಮದ್ಯಪಾನ ಮಾಡದಿರು ವುದು ಉತ್ತಮ. ಪೌಷ್ಟಿಕ ಹಾಗೂ ಪ್ರೋಟೀನ್ ಯುಕ್ತ ಆಹಾರ ಸೇವಿಸಿದಾಗ ತೂಕ ಹೆಚ್ಚಾಗುತ್ತದೆ. ಇದರಿಂದಾಗಿ ಅಡ್ಡಪರಿಣಾಮಗಳು ಕಡಿಮೆಯಾಗಿ ಆರೋಗ್ಯಕರ ಭಾವನೆಗಳು ಮೂಡುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಬಿಇಓ ಯು. ಬಸವರಾಜಪ್ಪ, ತಾ.ಪಂ. ಅಧ್ಯಕ್ಷ ವೀರಭದ್ರಪ್ಪ ಆದಾಪುರ, ಹಿರಿಯ ಆರೋಗ್ಯ ಸಹಾಯಕ ಎಂ‌. ಉಮ್ಮಣ್ಣ, ಸುಧಾ ಪಿ ಸುಳಕೆ, ಆಶಾ, ಎ.ಎಲ್. ಮಂಜುನಾಥ್, ವಿಜಯಲಕ್ಷ್ಮಿ ಇನ್ನಿತರರಿದ್ದರು.

error: Content is protected !!