ಸಂಕಷ್ಟದ ದಿನಗಳಲ್ಲಿ ಜನತೆಗೆ ನೆರವಾಗುವಂತೆ ಶ್ರೀಗಳ ಕರೆ

ಹೊನ್ನಾಳಿ, ಜೂ.27 – ಅನ್ಯರ ಸಂಕಷ್ಟಗಳಿಗೆ ನೆರವಾಗುವ ಮೂಲಕ ತಮ್ಮ ಜನ್ಮ ದಿನ ಹಾಗೂ ವಿವಾಹ ಮಹೋತ್ಸವಗಳನ್ನು ಆಚರಿಸಿಕೊಳ್ಳುವುದು ಹೆಚ್ಚು ಹರ್ಷವನ್ನು ತರಲಿದೆ ಎಂದು ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅಕ್ಕಿಗಿರಣಿ ಮಾಲೀಕ ಹಾಗೂ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹೆಚ್‍.ಎ. ಉಮಾಪತಿ ಅವರು ತಮ್ಮ 61ನೇ ವರ್ಷದ ಜನ್ಮದಿನ ಹಾಗೂ 26ನೇ ವರ್ಷದ ವಿವಾಹ ಮಹೋ ತ್ಸವದ ಅಂಗವಾಗಿ ಹಿರೇಕಲ್ಮಠದಲ್ಲಿ ಇಂದು ಹಮ್ಮಿಕೊಂಡಿದ್ದ ಪಟ್ಟಣದ ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಹೆಚ್‍.ಎ. ಉಮಾಪತಿ ಮಾತನಾಡಿ,   ಆಡಂಬರದ ದಿನಾಚರಣೆಯಲ್ಲಿ ಅರ್ಥವಿಲ್ಲ ಎಂದು ಭಾವಿಸಿ, ಬಸ್‍ ನಿಲ್ದಾಣದ ಬಳಿಯೇ ನಮ್ಮ ಮನೆ ಎದುರು ಸಣ್ಣ ಮಕ್ಕಳು ಮಳೆ ಚಳಿಗಾಳಿ ಎನ್ನದೆ  ಮನೆ – ಮನೆಗಳಿಗೆ ಪತ್ರಿಕೆಗಳನ್ನು  ವಿತರಣೆ ಮಾಡುತ್ತಿರುವುದನ್ನು ಮನೆಗಂಡು
ಕೊರೊನಾ ಸಂಕಷ್ಟದ ದಿನಗಳಲ್ಲಿ ಇವರಿಗೆ ನೆರವಾಗುವ ತಮ್ಮ ಇಚ್ಛೆ ವ್ಯಕ್ತಪಡಿಸಿ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.

ಇದೇ ರೀತಿಯಾಗಿ  ನಮ್ಮ ತಂದೆ-ತಾಯಿ ಹಳದಪ್ಪ ಶ್ರೀಮತಿ ಗಂಗಮ್ಮ ಇವರ ಹೆಸರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ದಿ ಸಮಿತಿಗೆ 50 ಸಾವಿರ ನೀಡುತ್ತಿದ್ದು, ಪ್ರತಿಭಾನ್ವಿತ ಮಕ್ಕಳ ಪ್ರೋತ್ಸಾಹಕ್ಕೆ ಇದು ಬಳಕೆಯಾಗಲಿ ಎಂದು  ಅವರು ಕೇಳಿಕೊಂಡರು.

ಪತ್ರಕರ್ತ ಮೃತ್ಯುಂಜಯ ಪಾಟೀಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಭೆಯಲ್ಲಿ ಮಠದ ವ್ಯವಸ್ಥಾಪಕ ಚನ್ನಬಸಯ್ಯ, ಸುನೀತಾ ಉಮಾಪತಿ, ರಂಜಿತಾ ಮತ್ತಿತರರು ಇದ್ದರು. 

error: Content is protected !!