ಮಾರ್ಕೆಟಿಂಗ್ ಸೊಸೈಟಿ ಪ್ರತಿನಿಧಿ ಆಯ್ಕೆಗೆ ಉಚ್ಛ ನ್ಯಾಯಾಲಯದ ತಡೆಯಾಜ್ಞೆ

ರಾಣೇಬೆನ್ನೂರು, ಮಾ. 23 – ಎಪಿಎಂಸಿಗೆ ಕಳಿಸುವ ತನ್ನ ಪ್ರತಿನಿಧಿ ಆಯ್ಕೆಗೆ ಇಂದು ನಡೆ ಯಲಿದ್ದ ಮಾರುಕಟ್ಟೆ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನು ದಿನಾಂಕ 26 ರವರೆಗೆ ತಡೆಹಿಡಿಯುವಂತೆ ಉಚ್ಛ ನ್ಯಾಯಾಲಯ ನೀಡಿದ ಆದೇಶವನ್ನು ಪಾಲನೆ ಮಾಡಲು ಇಂದಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಚುನಾವಣಾಧಿಕಾರಿ ತಹಸೀಲ್ದಾರ್‌ ಶಂಕರ್‌ ಹೇಳಿದರು. ಸಭೆ ವೇಳಾಪಟ್ಟಿಯಂತೆ ಇಂದು ಮಧ್ಯಾಹ್ನ 1 ಗಂಟೆಯೊಳಗೆ ಅವಶ್ಯಬಿದ್ದರೆ ಮತದಾನ ನಡೆಸಿ ಪ್ರತಿನಿಧಿಯ ಹೆಸರು ಪ್ರಕಟಿಸಲಾಗುತ್ತಿತ್ತು. ಆದರೆ ಬೆಳಿಗ್ಗೆ 11-30ರ ಸಮಯಕ್ಕೆ ಬಿಜೆಪಿ ನಿರ್ದೇಶಕ ಪಿ. ಆರ್. ಬಸೆನಾಯ್ಕ ಉಚ್ಛ ನ್ಯಾಯಾಲಯದ ತಡೆ ಆದೇಶದ ಪ್ರತಿ ಸಲ್ಲಿಸಿದರೆಂದು ಹೇಳಲಾಗಿದೆ.

ರೈತರು, ವರ್ತಕರು, ಸಂಸ್ಕರಣ ಘಟಕ, ಮಾರುಕಟ್ಟೆ ಕ್ಷೇತ್ರ ಮತ್ತು ಸರ್ಕಾರದ ಮೂವರು ನಾಮಕರಣ ಸದಸ್ಯರು ಸೇರಿದಂತೆ ಒಟ್ಟು 17 ನಿರ್ದೇಶಕರಲ್ಲಿ 9 ಕಾಂಗ್ರೆಸ್ ನವರು 8 ಬಿಜೆಪಿಯವರಿದ್ದು, ಇದುವರೆಗೂ  ಕಾಂಗ್ರೆಸ್ ಆಡಳಿತ ನಡೆಸುತ್ತಾ ಬಂದಿದೆ. ಓರ್ವರ ನಿಧನ ಹಾಗೂ ಓರ್ವರ ನಿವೃತ್ತಿಯಿಂದಾಗಿ ಕಾಂಗ್ರೆಸ್ ಬಲ ಏಳ ಕ್ಕಿಳಿದಿದೆಯಾದರೂ ಸಹ ಅಧಿಕಾರ ಕೈ ಬಿಡಲಾರದು ಎಂದು ಸಹ ಹೇಳಲಾಗುತ್ತಿದೆ. ಪ್ರಸಕ್ತ ನಿರ್ದೇಶಕ ಮಂಡಳಿಯ ಅವಧಿ ಕೇವಲ 11 ತಿಂಗಳುಗಳಿದ್ದು, ಈ ಅವಧಿಯಲ್ಲಿ ಇಂದು ನಡೆಯಬೇಕಾಗಿದ್ದ ಚುನಾವಣೆ ಎಂದೇ ನಡೆದ ರೂ ಸಹ ಈ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ ಎಂದು ಅಧ್ಯಕ್ಷ ಬಸವರಾಜ ಸವಣೂರ, ನಿರ್ದೇಶ ಕರಾದ ಮಂಜನಗೌಡ ಪಾಟೀಲ, ಜೆಟ್ಟೆಪ್ಪ ಕರೇಗೌಡ್ರ, ಶರಶ್ಚಂದ್ರ ದೊಡ್ಮನಿ ಪ್ರತಿಕ್ರಿಯಿಸಿದರು.

ಆಪರೇಷನ್ ಕಮಲ ಹುನ್ನಾರ : ಸಂಪೂರ್ಣ ಕಾಂಗ್ರೆಸ್ ಮಯವಾಗಿರುವ ಟಿಎಪಿಸಿಎಂಎಸ್ ನಲ್ಲಿ ಆಪರೇಷನ್ ಕಮಲ ಮಾಡಿ ಚುನಾವಣೆ ನಡೆಸಿ, ಆ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿ, ನ್ಯಾಯಾಲಯದ ತಡೆ ತರಲು ಪೂರಕ ವ್ಯವಸ್ಥೆಯನ್ನು ಬಿಜೆಪಿ ಮಾಡಿಕೊಂಡಿದೆ ಎನ್ನುವ ಹಾಗೂ ಇತ್ತೀಚೆಗೆ ನಡೆದ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೂ ಅಧಿಕಾರ ಗಿಟ್ಟಿಸಲು ನಡೆಸಿದ ಬಿಜೆಪಿ ಹುನ್ನಾರ ಫಲಿಸಲಿಲ್ಲ ಎನ್ನುವ ಮಾತುಗಳು ಕೇಳಿಬಂದವು.

error: Content is protected !!