ಹರಪನಹಳ್ಳಿ, ಜೂ.14- ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆ ವಿರುದ್ಧ ಹರಪನಹಳ್ಳಿ ಪಟ್ಟಣ ಸೇರಿದಂತೆ, ತಾಲ್ಲೂಕಿನ ಮತ್ತಿಹಳ್ಳಿ. ಬೆಣ್ಣಿಹಳ್ಳಿ, ನೀಲಗುಂದ ತೆಲಗಿ, ದುಗ್ಗಾವತಿ, ಕೂಲಹಳ್ಳಿ, ಬಾಗಳಿ, ಕೆ.ಕಲ್ಲಹಳ್ಳಿ ನಿಚ್ಚವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ. ವೀಣಾ ಮಹಾಂತೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್ಕಾರ ಈ ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆಯನ್ನು
ಕೈಗೆಟಕುವ ದರದಲ್ಲಿ ನಿಗದಿ ಮಾಡಬೇಕು ಎಂದು ವೀಣಾ ಒತ್ತಾಯಿಸಿದರು. ಯಡಿಯೂರಪ್ಪನವರ ಮುಖ್ಯಮಂತ್ರಿ ಕುರ್ಚಿ ಉಳಿಸಲು ಸ್ವಾಮೀಜಿಗಳ ದಂಡೇ ನಿಂತಿದ್ದು, ಈ ಬೆಳವಣಿಗೆ ರಾಜಕೀಯ ಹಾಗೂ ಧಾರ್ಮಿಕ ಎರಡೂ ಕ್ಷೇತ್ರಗಳಿಗೂ ಒಳ್ಳೆಯದಲ್ಲ ಎಂದರು.
ಈ ಸಂದರ್ಭದಲ್ಲಿ ಚಿಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಹರಿಯಮ್ಮನಹಳ್ಳಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್ ಮಕರಬ್ಬಿ, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ನ್ಯಾಯವಾದಿ ಸಿದ್ಧಲಿಂಗನಗೌಡ, ಮುಖಂಡರಾದ ಮಂಜುನಾಥ ದುಗ್ಗಾವತಿ, ದಾದಾ ಖಲಂದರ್, ಗಾಯತ್ರಮ್ಮ, ರೂಪ, ಲಕ್ಷಿ, ರೇಖಾ, ಉಮಾ, ಸೀತಾ, ಕಾಳಮ್ಮ, ತಿಮ್ಮಲಾಪುರದ ನಾಗರಾಜ, ಸಚಿನ್ ಕುಮಾರ್, ಮದ್ದಾನ ಸ್ವಾಮಿ, ಇಸ್ಮಾಯಿಲ್, ಮಂಜು ನಾಥ. ಮಹೇಶ, ಸಾಗರ್ ಪಟೇಲ್ ಇನ್ನಿತರರಿದ್ದರು.