ಏಪ್ರಿಲ್ 15ರೊಳಗೆ ಒಳಚರಂಡಿ ಸಂಪರ್ಕ ಪಡೆದುಕೊಳ್ಳುವಂತೆ ಮನವಿ

ಹರಿಹರ, ಮಾ.19-  ಕೆಯುಐಡಿಎಫ್‍ಸಿ-ಕೆಐಯುಡಬ್ಲ್ಯೂಎಂಐಪಿ-ಪಿ.ಐ.ಯು., ಹರಿಹರದ ನಗರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯಡಿ ಒಳ ಚರಂಡಿ ಪೈಪ್‌ಲೈನ್, ಮ್ಯಾನ್‍ಹೋಲ್ ಹಾಗೂ ಸಂಸ್ಕರಣಾ ಘಟಕಗಳ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಅನುಷ್ಠಾನದ ಹಂತದಲ್ಲಿ ಮ್ಯಾನ್‍ಹೋಲ್‌ಗಳಿಂದ ರಸ್ತೆಯ ಬದಿವರೆಗೆ ಪೈಪ್ ಜೋಡಣೆ ಮಾಡಿದ್ದು, ಒಳಚರಂಡಿ ವ್ಯವಸ್ಥೆಯನ್ನು ಮನೆಗಳಿಗೆ ಸಂಪರ್ಕ ಕಲ್ಪಿಸಲು ಯೋಜನೆಯನ್ನು ಸಿದ್ದಪಡಿಸಲಾಗಿದೆ.

2018ರ ಅಕ್ಟೋಬರ್ 29 ರಂದು ನಗರಸಭೆ ಠರಾವು, ವಿಷಯ ಮತ್ತು ತೀರ್ಮಾನ ಸಂಖ್ಯೆ: 32 ಗೃಹ ಬಳಕೆಗೆ 3000/- ರೂಪಾಯಿ ಗಳನ್ನು ವಸೂಲಿ ಮಾಡಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಸದರಿ ಯೋಜನೆಯ ಉದ್ದೇಶವು ಹರಿಹರ ನಗರದ ಜನತೆಗೆ ಉತ್ತಮ, ಗುಣಮ ಟ್ಟದ ಜೀವನವನ್ನು ನಡೆಸುವ ಅವಕಾಶ ಕಲ್ಪಿಸುವು ದಾಗಿರುತ್ತದೆ. ಸಾರ್ವಜನಿಕರು ಒಳಚರಂಡಿ ಸಂಪರ್ಕ ಪಡೆಯಲು 3000/- ರೂ.ಗಳನ್ನು ನಗರಸಭೆ ಕಾರ್ಯಾಲಯದಲ್ಲಿ ಪಾವತಿಸಿ, ನಗರ ಸಭೆಯಿಂದ ಅನುಮತಿ ಪಡೆದ ಪ್ಲಂಬರ್‍ಗಳ ಸಹಾಯ ಪಡೆದು ತಮ್ಮ ಮನೆಯ ಸಂಪರ್ಕದ ಜೋಡಣೆಯನ್ನು ಮಾಡಿಸಿಕೊಳ್ಳಲು ಕೋರಲಾಗಿದೆ.

ನಗರಸಭೆಯ ನೋಂದಾಯಿತ ಪ್ಲಂಬರ್ ಗುತ್ತಿಗೆದಾರರು ಅಬ್ದುಲ್ ಕಲೀಲ- 9844548231, ಯೋಗೇಶ್ವರ: 8296379261 ಇವರನ್ನು ಸಂಪರ್ಕಿಸಿ ಹಣ ತುಂಬಿ ಸಂಪರ್ಕ ಪಡೆದುಕೊಳ್ಳಲು  ತಿಳಿಸಿದ್ದಾರೆ. ಒಳಚರಂಡಿ  ಪೈಪ್ ತಮ್ಮ ತಮ್ಮ ಮನೆಯ ಹತ್ತಿರ  ಪೈಪ್‍ಗಳಿದ್ದು, ಅವುಗಳ ಒಳಚರಂಡಿ  ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

ಏಪ್ರಿಲ್ 15 ರೊಳಗೆ ಒಳಚರಂಡಿ ಸಂಪರ್ಕ ಪಡೆದುಕೊಳ್ಳದೆ, ಚರಂಡಿಗೆ ನೇರವಾಗಿ ನೀರು ಬಿಟ್ಟರೆ ಅಂತವರ ಮೇಲೆ ಪ್ರತಿ ತಿಂಗಳು 500/- ರೂ ದಂಡ ವಸೂಲಿ ಮಾಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

error: Content is protected !!