ಯಾರೂ ಹಸಿವಿನಿಂದ ನರಳಬಾರದು

ಜಗಳೂರು, ಜೂ.7- ಕೊರೊನಾ ಕಾರಣದಿಂದಾಗಿ ತಾಲ್ಲೂಕಿನಲ್ಲಿ ಯಾರೂ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಸ್ವಂತ ಹಣದಿಂದ ಫುಡ್‌ಕಿಟ್ ನೀಡಿದ್ದೇನೆ ಎಂದು ಶಾಸಕರು ಹಾಗೂ  ಶ್ರೀ ವಾಲ್ಮೀಕಿ ಪರಿಶಿ ಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ತಿಳಿಸಿದ್ದಾರೆ.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ 50 ವಿಕಲಚೇತನ ಕುಟುಂಬಗಳಿಗೆ ಫುಡ್‌ಕಿಟ್‌ಗಳನ್ನು  ಅವರ ಸ್ವಂತ ಹಣದಿಂದ ವಿತರಿಸಿ ಅವರು ಮಾತನಾಡಿ ದರು. ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯತೆ ಎದುರಾಗಿದೆ. ಈ ಸಂದರ್ಭದಲ್ಲಿ ಅವರ ಜೀವನ ತುಂಬಾ ಕಷ್ಟವಾಗಿದೆ. ಇದನ್ನು ಗಮನಿಸಿ ನನ್ನ ವೈಯಕ್ತಿಕ ಹಣದಿಂದ 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್‌ಕಿಟ್‌ ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ತಹಶೀಲ್ದಾರ್ ಗಿರೀಶ್ ಬಾಬು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಉಪ ತಹಶೀಲ್ದಾರ್ ರಾಮಚಂದ್ರಪ್ಪ, ಗ್ರೇಡ್ 2 ತಹಶೀಲ್ದಾರ್ ಮಂಜಾನಂದ, ಕಂದಾಯ ನಿರೀಕ್ಷಕ, ಕುಬೇರ್ ನಾಯ್ಕ, ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಪ.ಪಂ. ಸದಸ್ಯ ಪಾಪಲಿಂಗಪ್ಪ  ಇನ್ನಿತರರಿದ್ದರು.

error: Content is protected !!