ಮಲೇಬೆನ್ನೂರು, ಮಾ18- ಸುಕ್ಷೇತ್ರ ಉಕ್ಕಡಗಾತ್ರಿ ಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬಯಲು ಜಂಗೀ ಕುಸ್ತಿಯ ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗದ ಕಿರಣ್ ಮತ್ತು ಉತ್ತರ ಪ್ರದೇಶದ ಬಂಡಿ ಅವರು ಸಮಬಲ ಪಡೆದ ಕಾರಣ ಇಬ್ಬರಿಗೂ ನಗದು ಬಹುಮಾನ ಹಾಗೂ ಅಜ್ಜಯ್ಯನ ಪೋಟೋ ನೀಡಿ ಅಭಿನಂದಿಸಲಾಯಿತು.
ಇದರಿಂದಾಗಿ ಈ ಬಾರಿ ಬೆಳ್ಳಿ ಗದೆ ಯಾರ ಪಾಲು ಹಾಗದೆ ಹಾಗೆಯೇ ಉಳಿದಿದೆ. ಕಳೆದೆರಡು ದಿನಗಳಿಂದ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಸುಮಾರು 120 ಕುಸ್ತಿ ಪಟುಗಳು ಭಾಗವಹಿಸಿ ಗೆಲುವಿಗೆ ಸೆಣಸಾಟ ನಡೆಸಿದ್ದರು.
ಅಂತಿಮವಾಗಿ ಗೆದ್ದ ಕುಸ್ತಿ ಪಟುಗಳಿಗೆ ಬಹುಮಾನ ವಿತರಣೆಯನ್ನು ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಹಾಗು ಟ್ರಸ್ಟ್ ಸದಸ್ಯರು ನಡೆಸಿಕೊಟ್ಟರು. ಕುಸ್ತಿ ಪಂದ್ಯಾವಳಿ ವೀಕ್ಷಣೆಗೆ ಜನ ಕಿಕ್ಕಿರಿದು
ಸೇರಿದ್ದರು.