ದಾವಣಗೆರೆ, ಆ. 4 – ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ರೈಲ್ವೆಯ ಸೀಸನ್ ಟಿಕೆಟ್‌ಗೆ ಮತ್ತೆ ಚಾಲನೆ ನೀಡಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಗೊಳಿಸಿದ ನಂತರ, ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೇಟ್ ಕೌಂಟರ್‌ಗಳಲ್ಲಿ ಮತ್ತು UTSONMOBILE ಆಪ್‌ನಲ್ಲಿ ಪ್ರಯಾಣಿಕ ರಿಗೆ ಮಾಸಿಕ ಸೀಸನ್ ಟಿಕೆಟ್‌ಗಳ ಸೌಲಭ್ಯವನ್ನು ಆಗಸ್ಟ್ 3ರಿಂದ ಪುನರಾ ರಂಭಿಸಲಾಗಿದೆ ಎಂದು ತಿಳಿಸಲಾಗಿದೆ.
ಸೀಸನ್ ಟಿಕೆಟ್ ಸ್ಥಗಿತಗೊಳಿಸಿದ ಕಾರಣದಿಂದ ಹಲವಾರು ದಿನಗಳ ಪ್ರಯಾಣದ ಅವಕಾಶ ಕಳೆದುಕೊಂಡ ವರಿಗೆ, ಆ ದಿನಗಳಿಗೆ ಅನುಸಾರವಾಗಿ ಕಾಲಮಿತಿಯನ್ನು ವಿಸ್ತರಿಸಲಾಗುವುದು. ಆಗಸ್ಟ್ 9ರಿಂದ ಯು.ಟಿ.ಎಸ್. ಕೌಂಟರ್ ಗಳಲ್ಲಿ ಉಳಿದ ದಿನಗಳಿಗೆ ತತ್ಸಮಾನವಾಗಿ ಸಕ್ರಿಯಗೊಳಿಸಲಾಗುವುದು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದಿನಂತೆಯೇ ಸೀಸನ್ ಟಿಕೆಟ್ ಹೊಂದಿರುವವರಿಗೆ, ರೈಲುಗಳಲ್ಲಿ ಮತ್ತು ರೈಲ್ವೇ ಆವರಣದಲ್ಲಿ ಸೂಚಿತ ವ್ಯಕ್ತಿಗತ ದೂರ ಮಾರ್ಗಸೂಚಿಗಳು ಮತ್ತು ನೈರ್ಮಲ್ಯ ನಿಯಮಗಳನ್ನು ಸರಿಯಾಗಿ ಅನುಸರಿಸು ವುದರೊಂದಿಗೆ, ಕಾಯ್ದಿರಿಸದ ರೈಲುಗಳು ಮತ್ತು ಕಾಯ್ದಿರಿಸದ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಲಾಗಿದೆ.