ಹರಪನಹಳ್ಳಿ, ಮಾ.18- ತಾಲ್ಲೂಕಿನ ಐತಿಹಾಸಿಕ ಬಾಗಳಿ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಸರ್ಕಾರ ಘೋಷಣೆ ಮಾಡಿರುವ 8ನೇ ಜಿಲ್ಲಾ ಪಂಚಾಯ್ತಿಯಾಗಿ ಬಾಗಳಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಪ್ರಗತಿಪರ ಹೋರಾಟಗಾರರು ಮತ್ತು ಸಾರ್ವಜನಿಕರು ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಐ.ಬಿ. ವೃತ್ತದಿಂದ ನೂರಾರು ಸಂಖ್ಯೆಯಲ್ಲಿ ಹೋರಾಟಗಾರರು, ಸಾರ್ವಜನಿಕರು ಪ್ರತಿಭಟನೆ ಮುಖಾಂತರ ತಾಲ್ಲೂಕು ಮಿನಿ ವಿಧಾನಸೌಧದವರೆಗೂ ತೆರಳಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಬಾಗಳಿ ಗ್ರಾ.ಪಂ ಅಧ್ಯಕ್ಷ ಪೂಜಾರ್ ಹನುಮಂತಪ್ಪ, ಸದಸ್ಯರಾದ ಎನ್. ಮಂಜು ನಾಥ್, ನಾಗರಾಜ್, ಬಸವರಾಜ್, ಪಿಕಾರ್ಡ್ ಬ್ಯಾಂಕ್ ಸದಸ್ಯ ಶಿವನಗೌಡ, ಬಿ.ಬಿ. ಹೊಸೂರಪ್ಪ, ಕೊಟ್ರೇಶಪ್ಪ, ಹೊಸಹಳ್ಳಿ ಮಲ್ಲೇಶ್, ಎಚ್.ಎಂ. ಕೊಟ್ರೇಶ್, ಮಲ್ಲಿಕಾರ್ಜುನ, ಹರ್ಷವರ್ಧನ, ಹೆಚ್. ದೊಡ್ಡಬಸಪ್ಪ, ಎಸ್. ಬಸವರಾಜ, ಚನ್ನಬಸಪ್ಪ, ರೇಣುಕಪ್ಪ, ಶಂಕರ್, ಮೋಹನ್, ಗಿರೀಶ್, ಆರ್. ಕೊಟ್ರೇಶ್ ಇನ್ನಿತರರಿದ್ದರು.