ಸಾಣೇಹಳ್ಳಿ, ಜು.31- ಆಗಸ್ಟ್ 1 ರಿಂದ 31 ರವರೆಗೆ ಅಂತರ್ಜಾಲದಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತರಳಬಾಳು ಬೃಹನ್ಮಠದ ಶಾಖಾಮಠ ಮಠದ ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
`ಮತ್ತೆ ಕಲ್ಯಾಣ-21’ರ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ಈ ವರ್ಷವೂ ಅಂತರ್ಜಾಲದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮ ಇದೇ ಆಗಸ್ಟ್ 1 ರಿಂದ 31 ರ ವರೆಗೆ ನಡೆಯಲಿದೆ. ಕಾರ್ಯಕ್ರಮ ಪ್ರತಿದಿನ ಸಂಜೆ 6.30 ರಿಂದ ಆರಂಭವಾಗಿ ಸಂಬಂಧಿ ಸಿದ ವಚನಕಾರರ ವಚನಗೀತೆ, ಸ್ವಾಗತ, ಉಪನ್ಯಾಸ ಮತ್ತು ನಮ್ಮ ಮಾತುಗಳಲ್ಲದೆ ಕೊನೆಗೆ ಕಲ್ಯಾಣಗೀತೆಯೊಂದಿಗೆ ಮುಕ್ತಾಯಗೊಳ್ಳುವುದು. ಈ ಬಾರಿ ಪ್ರತಿದಿನ ಒಬ್ಬೊಬ್ಬ ಶರಣ/ಶರಣೆ, ಅದರಲ್ಲೂ ಅಲಕ್ಷಿತ ಶರಣ/ಶರಣೆಯರ ಸಂಕ್ಷಿಪ್ತ ಪರಿಚಯ, ಆಶಯ ಮತ್ತು ವೈಶಿಷ್ಟ್ಯ ಕುರಿತು ಒಬ್ಬೊಬ್ಬ ಚಿಂತಕರು ತಮ್ಮ ವಿಚಾರ ಮಂಡಿಸುವರು ಎಂದು ಹೇಳಿದರು.
ಉದ್ಘಾಟನೆಯನ್ನು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೆರವೇರಿಸಲಿದ್ದು, ಸಮಾರೋಪ ನುಡಿಗಳನ್ನು ಚಿಂತಕ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಆಡುವರು. ಡಾ. ಕವಿತಾ ರೈ-ಹಡಪದ ಅಪ್ಪಣನ ಪುಣ್ಯಸ್ತ್ರೀ ಲಿಂಗಮ್ಮ, ಎನ್ ಅನಂತನಾಯಕ-ಮೋಳಿಗೆ ಮಾರಯ್ಯ, ಡಾ. ಶಶಿಕಲಾ ಮೊರಬದ -ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಡಾ. ಜಿ.ಎಂ. ಗಣೇಶ್-ಬೊಂತಾದೇವಿ, ಡಾ. ಶ್ರೀದೇವಿ ಕೆರೆಮನೆ- ಅಲ್ಲಮ ಪ್ರಭುದೇವರು, ಟಿ.ಆರ್. ಶಿವಪ್ರಸಾದ್-ಸತ್ಯಕ್ಕ, ಡಾ. ಪಿ. ಚಂದ್ರಿಕಾ-ಅಕ್ಕಮ್ಮ, ಪ್ರೊ. ತೇಜಸ್ವಿ ವಿ ಕಟ್ಟೀಮನಿ – ತಳವಾರ ಕಾಮಿದೇವಯ್ಯ, ಸುಮಂ ಗಲಾ ಎಸ್. ಮುಮ್ಮಿಗಟ್ಟಿ-ಮುಕ್ತಾಯಕ್ಕ, ಡಾ. ರಾಜಶೇಖರ ನಾರನಾಳ-ಮಾದಾರ ಧೂಳಯ್ಯ, ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ-ಅಕ್ಕಮಹಾ ದೇವಿ, ಗಣೇಶ್ ಅಮೀನಗಢ-ಮಡಿವಾಳ ಮಾಚಿದೇವ, ಸುನಂದ ಕಡಮೆ-ಮೋಳಿಗೆ ಮಹಾದೇವಿ ಅವರ ಕುರಿತು ಮಾತನಾಡಲಿದ್ದಾರೆ.
ಹನುಮಂತ ಹಾಲನಗೇರಿ-ನುಲಿಯ ಚಂದಯ್ಯ, ಗೌರಿಪ್ರಸನ್ನ- ಉರಿಲಿಂಗಪೆದ್ದಿ, ಡಾ. ರಾಜಪ್ಪ ದಳವಾಯಿ-ಸೂಳೆ ಸಂಕವ್ವೆ, ಡಾ. ಜಯಶ್ರೀ ಸುಕಾಲೆ-ಗೊಗ್ಗವ್ವೆ, ಕೆ. ವೆಂಕಟೇಶ್ವರ – ಬಹುರೂಪಿ ಚೌಡಯ್ಯ, ರೂಪಾ ಕುಮಾರಸ್ವಾಮಿ-ಅಮ್ಮುಗೆ ರಾಯಮ್ಮ, ಡಾ. ಎಂ. ಎಸ್. ಮೂರ್ತಿ-ದೇವರ ದಾಸಿಮಯ್ಯ, ಡಾ. ಜ.ನಾ. ತೇಜಶ್ರೀ-ನಾಗಲಾಂಬಿಕೆ, ಮಹಾ ದೇವ ಹಡಪದ-ಗಾಣದ ಕನ್ನಪ್ಪ, ಸುನೀತಾ ನ .ಮೂರಶಿಳ್ಳಿ-ನೀಲಾಂಬಿಕೆ, ಯು.ಹೆಚ್. ಉಮರ್-ಅಂಬಿಗರ ಚೌಡಯ್ಯ, ಡಾ. ಜಿ.ಎಸ್. ಶಿವಪ್ರಸಾದ್-ಅನಿವಾಸಿ ಭಾರತೀಯ ರಿಗೆ ಬಸವ ತತ್ವದ ಪ್ರಸ್ತುತತೆ, ಡಾ. ಅರಿವು ಶಿವಪ್ಪ-ಮಾದಾರ ಚೆನ್ನಯ್ಯ, ದೋತ್ತೋರೆಸ್ಸ ಜಯಮೂರ್ತಿ-ಆಯ್ದಕ್ಕಿ ಲಕ್ಕಮ್ಮ, ಡಾ. ರುದ್ರೇಶ್ ಅದರಂಗಿ-ಮರುಳ ಶಂಕರದೇವ, ಶಶಿಧರ ಹೆಬ್ಬಾಳ–ಆದಯ್ಯ, ಪ್ರಕೃತಿ ಎಂ. ಗುರುರಾಜ್–ಗಂಗಾಂಬಿಕೆ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ-ಡೋಹರ ಕಕ್ಕಯ್ಯ ಕುರಿತಂತೆ ಮಾತನಾಡುವರು ಎಂದು ತಿಳಿಸಿದರು.
ಇದರ ನೇರ ಪ್ರಸಾರವನ್ನು ವೆಬ್: http://www.shivasanchara.org, ಯೂಟ್ಯೂಬ್: shivasanchara, ಫೇಸ್‍ಬುಕ್: ಶಿವ ಸಂಚಾರ-ಸಾಣೇಹಳ್ಳಿ ಈ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸುವುದರ ಮೂಲಕ ಸಾರ್ವಜನಿಕರು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.