ದಾವಣಗೆರೆ, ಜು.31- ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಸ್ಪೋಟಕಗಳನ್ನು ಪತ್ತೆ ಮಾಡಿ, ಇಬ್ಬರನ್ನು ಬಂಧಿಸುವಲ್ಲಿ ಪೂರ್ವ ವಲಯ ಐಜಿ ಸ್ಕ್ವಾಡ್ ಯಶಸ್ವಿಯಾಗಿದೆ.
ಬಾಗಲಕೋಟೆ ಜಿಲ್ಲೆ ಮೂಲದ ವಿಶ್ವನಾಥ ಹಾಗೂ ಸೋಮಲಿಂಗಯ್ಯ ಬಂಧಿತ ಆರೋಪಿಗಳು. 2 ಬೊಲೆರೋ ವಾಹನಗಳಲ್ಲಿ ಬಾಗಲ ಕೋಟೆಯಿಂದ ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ ಬಳಿಯ ಕಲ್ಲಿನ ಕ್ವಾರಿಗಳಲ್ಲಿ ಬಳಸುವ ಸ್ಪೋಟಕಗಳನ್ನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪೆಕ್ಸ್ 90 ಪೌಡರ್ನ 2800 ಪಾಕೆಟ್ಗಳು, 69 ಜಿಲೆಟಿನ್ ಟ್ಯೂಬ್ಗಳು, 762 ಎಲೆಕ್ಟ್ರಾನಿಕ್ ಡಿಟೋನೇಟರ್ಗಳನ್ನು ಆಲೂರು ಗ್ರಾಮದ ಕಲ್ಲು ಕ್ವಾರಿ ಬಳಿ ಐಜಿ ಸ್ಕ್ವಾಡ್ನ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.
ಬೊಲೆರೋ ವಾಹನಗಳ ಮಾಲೀಕ ನವೀನ ಕುಮಾರ್ ವಾಲಿ ಎಂಬಾತನ ವಿರುದ್ಧ ಅಕ್ರಮ ಸ್ಪೋಟಕ ದಾಸ್ತಾನು, ಸಾಗಾಟದ ಹಿನ್ನೆಲೆಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.