ದಾವಣಗೆರೆ, ಜು.31 – ದೇಶದಾದ್ಯಂತ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀಟುಗಳನ್ನು ಮೇಲ್ವರ್ಗದವರು ಪಡೆದುಕೊಳ್ಳುತ್ತಿದ್ದರು. ಮೊನ್ನೆ ನಡೆದ ಲೋಕಸಭಾ ಅಧಿವೇಶನದಲ್ಲಿ ಮಹತ್ವದ ನಿರ್ಧಾರ ತೆಗುದುಕೊಂಡಿದ್ದು ಪ್ರತಿ ಮೆಡಿಕಲ್ ಕಾಲೇಜಿನಲ್ಲಿ ಶೇಕಡ 27 ರಷ್ಟು ಹಿಂದುಳಿದ ವರ್ಗಗಳಿಗೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆದೇಶ ನೀಡಿರುವುದು ಸುಮಾರು ನಾಲ್ಕು ಸಾವಿರ ಸೀಟುಗಳು ಒಬಿಸಿ ಗೆ ಸಿಗಲಿವೆ. ಪ್ರಧಾನಿಯವರ ಈ ನಿರ್ಧಾರವನ್ನು ಶೋಷಿತ ವರ್ಗಗಳ ಒಕ್ಕೂಟ ಸಂಪೂರ್ಣವಾಗಿ ಸ್ವಾಗತಿಸಿದೆ ಎಂದು ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಹೇಳಿದ್ದಾರೆ.
2019 ರಿಂದಲೂ ಒಬಿಸಿ ಗಳಿಗೆ ಶೇಕಡ 27 ಸೀಟುಗಳನ್ನು ನೀಡಬೇಕೆಂದು ತಮಿಳುನಾಡಿನ ಮುಖ್ಯ ಮಂತ್ರಿ ಎಂ.ಕೆ. ಸ್ಟ್ಯಾಲಿನ್ ಮತ್ತು ತಮಿಳುನಾಡಿನ ಒಬಿಸಿ ಸಂಘಟನೆಗಳ ನಿರಂತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಆನಂದರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.