ಹರಿಹರ : ನೀರಿನ ಪೈಪ್ ದುರಸ್ತಿಗೆ ಕ್ರಮ ಕೈಗೊಂಡ ಅಧಿಕಾರಿಗಳು

ಹರಿಹರ, ಆ.2- ನಗರದ ಶಿವಮೊಗ್ಗ ರಸ್ತೆಯ ಸೇತುವೆ ಮೇಲೆ ಹಾದು ಹೋಗಿರುವ 24/7 ಕುಡಿಯುವ ನೀರಿನ ಸರಬರಾಜು ಪೈಪ್‌ ಒಡೆದಿದ್ದ ಕಾರಣ ವಿವಿಧ ಬಡಾವಣೆಯ ನಾಗರಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ, ಪತ್ರಿಕೆಗಳ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಪೈಪ್‌ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ.

ಹಲವು ದಿನಗಳಿಂದ ಪೈಪ್‌ ಒಡೆದು ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿತ್ತು. ವಿದ್ಯಾನಗರ, ಹೈಸ್ಕೂಲ್ ಬಡಾವಣೆ, ಮೋಚಿ ಕಾಲೋನಿ, ಬೆಂಕಿನಗರ, ಕಾಳಿದಾಸ ನಗರ ಸೇರಿದಂತೆ ಹಲವು ಬಡಾವಣೆಗಳ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿತ್ತು. ಪೈಪ್ ದುರಸ್ತಿ ಮಾಡಲು ಮುಂದಾಗಿರುವ ಅಧಿಕಾರಿಗಳು, ಹಳೆಯ ಪೈಪ್ ತೆಗೆದು ಹೊಸದಾಗಿ ಪೈಪ್ ಅಳವಡಿಸಿದ್ದಾರೆ. ಇಸ್ಮಾಯಿಲ್, ವಿಜಯಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!