ದಾವಣಗೆರೆ, ಆ.2 – ಸ್ಪರ್ಶ ಫೌಂಡೇಶನ್ ವತಿಯಿಂದ ಇದೇ ಇದೇ ದಿನಾಂಕ 5 ರಂದು ನಗರದ ಎಂಸಿಸಿ ಎ ಬ್ಲಾಕ್‍ನ ಮೋದಿ ಕಾಂಪೌಂಡ್‍ನಲ್ಲಿರುವ ಎಸ್‍ಎಸ್ ಸ್ಪೆಷಾಲಿಟಿ ಕ್ಲಿನಿಕ್‍ನಲ್ಲಿ ಕೀಲು ಮತ್ತು ಮೂಳೆ ಅಥವಾ ವಿವಿಧ ನ್ಯೂನತೆಯಿಂದ ಬಳಲುತ್ತಿರುವ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಡಾ.ಶರಣ್ ಪಾಟೀಲ್ ಸ್ಥಾಪಿಸಿರುವ ಸ್ಪರ್ಶ ಆಸ್ಪತ್ರೆಯ ಸೇವಾ ವಿಭಾಗವಾಗಿರುವ ಸ್ಪರ್ಶ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳ ಬದುಕನ್ನು ಸುಖಮಯವಾಗಿಸಬೇಕೆಂಬ ಹಂಬಲದ ಫಲವಾಗಿ ರೂಪುಗೊಂಡ ಸಂಸ್ಥೆಯಿಂದ 200 ಕ್ಕೂ ಅಧಿಕ ಮಕ್ಕಳಿಗೆ ಸಂಪೂರ್ಣ ಉಚಿತ ಶಸ್ತ್ರ ಚಿಕಿತ್ಸಾ ಸೌಲಭ್ಯ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಪ್ರತಿ ವರ್ಷ ನಡೆಯುವ ‘ಸ್ಪರ್ಶ ವಚನ’ ವೈದ್ಯಕೀಯ ಸೇವಾ ಯೋಜನೆ ಪ್ರಾರಂಭಗೊಂಡ 12 ವರ್ಷಗಳಲ್ಲಿ 2 ಸಾವಿರ ಮಕ್ಕಳಿಗೆ ಉಚಿತ ಯಶಸ್ವೀ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಈ ವಿಶೇಷ ಸೇವೆಗಾಗಿಯೇ ಪ್ರಪಂಚದ ಮೂಲೆ ಮೂಲೆಗಳಿಂದ ಪರಿಣಿತ ವೈದ್ಯರು, ಆಡಳಿತ ತಜ್ಞರು, ದಾದಿಯರು ಸ್ವಯಂ ಸೇವಾಭಾವನೆಯಿಂದ ಆಗಮಿಸಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಯೋಜನೆಯ ಫಲಾನುಭವಿಗಳು ನೂರಾರು ಮಕ್ಕಳು ಎನ್ನುವುದು ದೊಡ್ಡ ಸಂಗತಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆಯ್ಕೆ ನಿಯಮಾವಳಿಗಳು-ಮೂಳೆ ಸಂಬಂಧಿತ ಚಿಕಿತ್ಸೆ:- ವಕ್ರಪಾದ, ಬೆನ್ನುಹುರಿ ದುರ್ಬಲತೆ, ಕೈ ದುರ್ಬಲತೆ , ಸೆರೆಬ್ರಲ್ ಪಾಲ್ಸಿ , ಪೋಸ್ಟ್ ಪೋಲಿಯೋ ಡಿಫಾರ್ಮಿಟಿ, ಪೋಸ್ಟ್ ಬರ್ನ್ ಕಾನ್‍ಟ್ರಕ್‍ಚರ್, ಸಮಸ್ಯೆಗಳಿಗೆ ತಪಾಸಣೆ ಮಾಡಲಾಗುತ್ತದೆ. ವಿವರಕ್ಕೆ ಸಂಪರ್ಕಿಸಿ 96869 29090 / 99162 94908.