ಗಂಗಾ ಸೊಸೈಟಿಯಿಂದ ಸಾರ್ವಜನಿಕ ಆಸ್ಪತ್ರೆಗೆ 3 ಕಾನ್ಸಂಟ್ರೇಟರ್ ಕೊಡುಗೆ

ರಾಣೇಬೆನ್ನೂರು, ಜೂ. 1 – ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆಯಾಗಬಾರದೆಂಬ ಉದ್ದೇಶ ದಿಂದ ಆಕ್ಸಿಜನ್ ಕಾನ್ಸಂ ಟ್ರೇಟರ್ ಅನ್ನು ನೀಡಲಾ ಗುವುದು ಎಂದು ಸ್ಥಳೀಯ ಗಂಗಾ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ರತ್ನಾಕರ ಕುಂದಾಪುರ ತಿಳಿಸಿದ್ದಾರೆ.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಗಾ ಕೋ- ಆಪರೇಟಿವ್ ಸೊಸೈಟಿ ವತಿಯಿಂದ 2.50 ಲಕ್ಷ ರೂ. ಮೌಲ್ಯದ 3 ಆಕ್ಸಿಜನ್ ಕಾನ್ಸಂಟ್ರೇ ಟರ್‍ಗಳನ್ನು ತಹಶೀಲ್ದಾರ್ ಅವರ ಮೂಲಕ ಆಸ್ಪತ್ರೆಗೆ ಹಸ್ತಾಂತರಿಸಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು. ಸ್ಥಳಿಯ ಹರ್ಷ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ಡಾ. ನಾಗರಾಜ ದೊಡ್ಮನಿ ಮಾತನಾಡಿ, ರೋಗಿಗಳ ಆರೋಗ್ಯ ರಕ್ಷಣೆ ಮಾಡಲು ಸರ್ಕಾರದ ಜೊತೆ ಕೈಜೋಡಿಸಲು ಗಂಗಾ ಸೊಸೈಟಿ ಮುಂದಾಗಿರುವುದು ಶ್ಲ್ಯಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಹಶೀಲ್ದಾರ್ ಜಿ.ಎಸ್. ಶಂಕರ್, ಡಿಎಚ್‍ಒ ರಾಘವೇಂದ್ರ ಸ್ವಾಮಿ, ಕೃಷ್ಣಮೂರ್ತಿ ಸುಣಗಾರ, ಡಾ. ಬಸವರಾಜ ಕೇಲಗಾರ, ಹನುಮಂತಪ್ಪ ಕುರು ವತ್ತಿ, ಬಗಾಡೆ, ಮಂಜುನಾಥ ಬಾರ್ಕಿ, ತಾಲ್ಲೂಕು ವೈದ್ಯಾಧಿಕಾರಿ ಸಂತೋಷ್ ಕುಮಾರ್‌, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಮೇ ಶಪ್ಪ, ಹನುಮಂತಪ್ಪ ಕಬ್ಬಾರ, ಲಕ್ಷ್ಮಣ ದಾಸರ, ಲಕ್ಷ್ಮಣ ಸುಣಗಾರ, ಆನಂದ ಸುಣಗಾರ, ಆಂಜನೇಯ ಬಾಳಿಕಾಯಿ, ಸಂಸ್ಥೆಯ ವ್ಯವಸ್ಥಾಪಕರಾದ ಅನ್ನ ಪೂರ್ಣ ಬಾರ್ಕಿ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!