ಕೂಡ್ಲಿಗಿ : ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಒತ್ತಾಯ

ಕೂಡ್ಲಿಗಿ, ಮಾ. 17- ಅಕ್ರಮ ಮದ್ಯ ಮಾರಾಟ ತಡೆಹಿಡಿಯಬೇಕು. ಮದ್ಯದಿಂದ ದಲಿತರಿಗೇ ಹೆಚ್ಚಾಗಿ ಆರ್ಥಿಕ ಹಿನ್ನಡೆಯಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಹಾಗೂ ವಾಲ್ಮೀಕಿ ಮುಖಂಡ ಕಾವಲ್ಲಿ ಶಿವಪ್ಪ ನಾಯಕ ದೂರಿದ್ದಾರೆ.

ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ  ದಲಿತರ ಸಭೆಯಲ್ಲಿ ಮಾತನಾಡುತ್ತಾ, ಅಕ್ರಮ ಮದ್ಯ ಮಾರಾಟದಿಂದ ಬಂಡವಾಳ ಶಾಹಿಗಳು ಬಲಿಷ್ಠರಾಗುತಿದ್ದಾರೆ. ಆದರೆ, ಅದರಿಂದಾಗಿ ದಲಿತ ವರ್ಗ ಆರ್ಥಿಕ ಶೋಷಣೆಗೆ ಗುರಿಯಾಗಿ ಅದಕ್ಕೆ ಬಲಿಯಾಗುತ್ತಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು, ಶೀಘ್ರವೇ ಅಕ್ರಮ ಮದ್ಯ ಮಾರಾಟಕ್ಕೆ ಸೂಕ್ತ ಕಡಿವಾಣ ಹಾಕಬೇಕಿದೆ ಎಂದರು.

ವಾಲ್ಮೀಕಿ ಯುವ ಮುಖಂಡ ಕೆ.ಬಿ. ಸುರೇಶ್, ಹಿರಿಯ ಪತ್ರಕರ್ತ ಎ.ಎಂ. ಸೋಮಶೇಖರಯ್ಯ, ಮಾಜಿ ಸೈನಿಕ ರಮೇಶ, ಪ.ಪಂ ಸದಸ್ಯ ಕಾಲ್ಚಟ್ಟಿ ಈಶಪ್ಪ ಮಾತನಾಡಿ ಮುಖಂಡರು, ನಾಗರಿಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂ ದಿಗೆ ಸಹಕಾರ ಮತ್ತು ಸೌಹಾರ್ದತೆಯೊಂದಿಗೆ ವಿಶ್ವಾಸವಿಟ್ಟು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದೋಣ. ಈ ಮೂಲಕ ಇಲಾಖಾಧಿಕಾರಿಗಳಿಗೆ ಕರ್ತವ್ಯಕ್ಕೆ ಸಹಕರಿಸೋಣ ಎಂದು ಸಭೆಗೆ ಸೂಚಿದರು. ಸಿಪಿಐ ವಸಂತ ಅಸೋದೆ ಮಾತನಾಡಿ, ಸಭೆಯಲ್ಲಿ ಚರ್ಚಿಸಿದ ಕೆಲವೊಂದು ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲಾಗುವುದು ಎಂದರು.

error: Content is protected !!